
1116 ಪಾರ್ಥಿವ ಶಿವಲಿಂಗಗಳಿಗೆ ಅಭಿಷೇಕ... ರುದ್ರ ಹೋಮ.. ಶಿವಪಾರ್ವತಿಯರ ದಿವ್ಯ ಕಲ್ಯಾಣ
ವೈದಿಕ ಯಾಗಶಾಲಾ, ಶ್ರೀಶೈಲ ಕ್ಷೇತ್ರ
ಸಂಕಷ್ಟಹರ ಚತುರ್ಥಿ ಪ್ರಯುಕ್ತ
10K+pujas conducted
You won't be charged yet
ಉದ್ಯೋಗ, ವ್ಯಾಪಾರ ಮತ್ತು ಹೊಸ ಕಾರ್ಯಗಳಲ್ಲಿನ ಎಲ್ಲಾ ಅಡೆತಡೆಗಳು ದೂರವಾಗುತ್ತವೆ.
1,000 ಮೋದಕಗಳ ಸಮರ್ಪಣೆಯಿಂದ ಗಣಪತಿ ಪ್ರಸನ್ನನಾಗಿ ಮನಸ್ಸಿನ ಸದಾಶಯಗಳನ್ನು ಪೂರೈಸುತ್ತಾನೆ.
ಕೇತು, ಬುಧ ಹಾಗೂ ಪೂರ್ವಜನ್ಮದ ಕರ್ಮದೋಷಗಳ ತೀವ್ರತೆ ಕಡಿಮೆಯಾಗುತ್ತದೆ.
ಸಂಕಷ್ಟಹರ ಚತುರ್ಥಿಯಂದು ಗಣಪತಿ ತತ್ವ ಜಾಗೃತವಾಗಿರುವುದರಿಂದ ವಿಶೇಷ ಪುಣ್ಯ ಲಭಿಸುತ್ತದೆ.
ಋಣಬಾಧೆ ಮುಕ್ತಿ, ವ್ಯಾಪಾರದಲ್ಲಿ ಲಾಭ ಹಾಗೂ ವಿದ್ಯಾರ್ಥಿಗಳಿಗೆ ಏಕಾಗ್ರತೆ ಹೆಚ್ಚಾಗುತ್ತದೆ.
ನಕಾರಾತ್ಮಕ ಶಕ್ತಿಗಳು ನಾಶವಾಗಿ ಕುಟುಂಬದಲ್ಲಿ ಸುಖ-ಶಾಂತಿ ಹಾಗೂ ಉತ್ತಮ ಆರೋಗ್ಯ ನೆಲೆಸುತ್ತದೆ.
ಭಕ್ತರ ಹೆಸರು, ಗೋತ್ರದೊಂದಿಗೆ ಸಂಕಲ್ಪ ಕೈಗೊಂಡು, ಕಾರ್ಯಸಿದ್ಧಿ ಮತ್ತು ಇಷ್ಟಾರ್ಥ ಸಿದ್ಧಿ, ವಿಘ್ನ-ಅಡೆತಡೆಗಳ ನಿವಾರಣೆ, ವಿದ್ಯೆ ಮತ್ತು ಬುದ್ಧಿಶಕ್ತಿಯ ವೃದ್ಧಿ, ಕುಟುಂಬದ ಸುಖ-ಶಾಂತಿ, ಸಮೃದ್ಧಿ ಹಾಗೂ ಹೊಸ ಕಾರ್ಯಗಳಲ್ಲಿ ಯಶಸ್ಸು ದೊರೆಯುವಂತೆ ಶ್ರೀ ಗಣಪತಿಯ ಅನುಗ್ರಹಕ್ಕಾಗಿ ಪ್ರಾರ್ಥಿಸಲಾಗುತ್ತದೆ.
ಶಾಸ್ತ್ರೋಕ್ತ ವಿಧಿವಿಧಾನಗಳೊಂದಿಗೆ ಪವಿತ್ರ ಕಲಶವನ್ನು ಸ್ಥಾಪಿಸಿ, ವೇದಮಂತ್ರಗಳ ಮೂಲಕ ಕಕಲಶದಲ್ಲಿ ದೇವತಾ ಆವಾಹನೆ ಮಾಡಿ, ಪೂಜಾ ವಿಧಿಗಳಿಗೆ ಮಂಗಳಕರ ಆರಂಭ ನೀಡಲಾಗುತ್ತದೆ.
ಷೋಡಶೋಪಚಾರ ಪೂಜೆ, ದುರ್ವಾರ್ಚನೆ, ಪುಷ್ಪಾರ್ಚನೆ ಹಾಗೂ ಮೋದಕ ನೈವೇದ್ಯ ಸಮರ್ಪಣೆ ಮಾಡಲಾಗುತ್ತದೆ.
ಗಣಪತಿ ಮೂಲಮಂತ್ರ ಹಾಗೂ ಗಣೇಶ ಮಂತ್ರಗಳನ್ನು ಭಕ್ತಿಯಿಂದ ಪಠಿಸಲಾಗಿತ್ತದೆ.
ಶ್ರೀ ಗಣಪತಿಗೆ ಅತ್ಯಂತ ಪ್ರಿಯವಾದ 1,000 ಮೋದಕಗಳನ್ನು ನೈವೇದ್ಯವಾಗಿ ಸಮರ್ಪಿಸಿ ಸಕಲ ಇಷ್ಟಾರ್ಥಗಳ ಸಿದ್ಧಿಗಾಗಿ ವಿಶೇಷ ಆರಾಧನೆ ಮಾಡಲಾಗಿತ್ತದೆ.
ಅಗ್ನಿಯನ್ನು ಪ್ರತಿಷ್ಠಾಪಿಸಿ, ಸಂಪ್ರದಾಯದಲ್ಲಿ ನಿಗದಿಪಡಿಸಿರುವ ಗಣಪತಿ ಮೂಲಮಂತ್ರಗಳೊಂದಿಗೆ ತುಪ್ಪ ಹಾಗೂ ಇತರ ಹೋಮದ್ರವ್ಯಗಳನ್ನು ಅಗ್ನಿಗೆ ಸಮರ್ಪಿಸಲಾಗುತ್ತದೆ. ಬಯಸಿದ ಕಾರ್ಯಗಳು ಸಿದ್ಧಿಯಾಗಲು ಪ್ರಾರ್ಥಿಸಲಾಗುತ್ತದೆ.
ಸಕಲ ಅಭೀಷ್ಟಗಳ ಈಡೇರಿಕೆಗಾಗಿ ಪ್ರಾರ್ಥಿಸಿ, ಹೋಮದ ಅಂತ್ಯದಲ್ಲಿ ಪೂರ್ಣಾಹುತಿ ಸಮರ್ಪಿಸಿ, ಪೂರ್ಣಾಹುತಿಯೊಂದಿಗೆ ಹೋಮವು ಶುಭವಾಗಿ ಮುಕ್ತಾಯಗೊಳ್ಳುತ್ತದೆ.
ಗಣಪತಿಗೆ ಮಂಗಳಾರತಿ ಸಲ್ಲಿಸಿ, ಭಕ್ತರ ಸಕಲ ಅಭೀಷ್ಟಗಳ ಈಡೇರಿಕೆಯಾಗಲಿ, ಸಕಲ ವಿಘ್ನಗಳು ನಿವಾರಣೆಯಾಗಲಿ ಎಂದು ಮತ್ತೊಮ್ಮೆ ಪ್ರಾರ್ಥಿಸಿ.ಪೂಜೆಯನ್ನು ಸಂಪನ್ನಗೊಳಿಸಲಾಗುತ್ತದೆ.
ಮಾನ್ಯ ಪುರೋಹಿತ್ ರವರೇ, ವೇದ ಮಂದಿರ, ತಿರುಪತಿ ಇಲ್ಲಿ ನೆರವೇರಿದ ವಾರಾಹಿ ಮತ್ತು ಚಂಡಿ ಹೋಮ ಪೂಜೆಗಳನ್ನು ವಿಡಿಯೋ ಮುಖಾಂತರ ನಾವೆಲ್ಲರೂ ನೋಡಿ ಧ್ಯನ್ಯರಾಗಿದ್ದೇವೆ. ಈ ಪೂಜೆಯಿಂದ ಶ್ರೀ ವಾರಹಿದೇವಿ ಮತ್ತು ಶ್ರೀ ಚಂಡಿಕಾ ದೇವಿ ಪ್ರಸನ್ನರಾಗಿ ನಮ್ಮ ಕಷ್ಟಕಾರ್ಪಣ್ಯಗಳನ್ನು ನಿವಾರಿಸುತ್ತಾರೆಂದು ಭಾವಿಸುತ್ತೇವೆ. ನಿಮ್ಮ ಪೂಜೆ ಕಾರ್ಯಕ್ರಮಗಳನ್ನು ತುಂಬಾ ಚೆನ್ನಾಗಿ ನಡೆಸಿಕೊಟ್ಟಿರುತ್ತೀರಿ , ಧನ್ಯವಾದ
ವೇದ ಮಂದಿರ ಹೋಮ ನನಗೆ ತುಂಬಾ ಇಷ್ಟ ಆಯ್ತು. ಸ್ಪಷ್ಟವಾದ ಸಂಸ್ಕೃತ ಉಚ್ಚಾರಣೆ, ಮನಸ್ಸಿಗೆ ನೆಮ್ಮದಿ ಕೊಡುವಂತಹ "ವಾರಾಹಿ ಅಮ್ಮನವರ ಪೂಜೆ" ನನ್ನ ಎಲ್ಲಾ ಕಷ್ಟಗಳನ್ನು ಅಮ್ಮನವರು ಪರಿಹಾರ ಮಾಡುವರೆಂದು ಸಂಕಲ್ಪ ಪೂಜೆಯನ್ನ ನೆರವೇರಿಸಿ ಕೊಟ್ಟಂತ ವೇದಮಂದಿರ ಪುರೋಹಿತರಿಗೆ ಅನಂತ ಕೋಟಿ ಧನ್ಯವಾದಗಳು
ನಮ್ಮ ಕುಟುಂಬದ ಒಳಿತಿಗಾಗಿ ಸಕಾಲದಲ್ಲಿ ಒಳ್ಳೆಯ ಮುಹೂರ್ತದಲ್ಲಿ ಪೂಜೆ ಹೋಮ ಮಾಡಿಕೊಟ್ಟ *ವೇದ ಮಂದಿರ* ಹಿರಿಯರಿಗೆ ಧನ್ಯವಾದಗಳು 🕉️🙏❤️