ಕಾರ್ತಿಕ ಮಾಸವೆಂದರೆ ಶಿವನ ಆರಾಧನೆಗೆ ಅತ್ಯಂತ ವಿಶೇಷವಾದ ಸಮಯ. ಅಂತಹ ಪವಿತ್ರ ಮಾಸದಲ್ಲಿ ಕಾರ್ತಿಕ ಹುಣ್ಣಿಮೆ (ಪೌರ್ಣಮಿ) ಇನ್ನೂ ವಿಶೇಷವಾದದ್ದು. ಇಂತಹ ಪವಿತ್ರ ದಿನದಂದು, ಅಷ್ಟೇ ಪವಿತ್ರವಾದ ಶ್ರೀಶೈಲ ಕ್ಷೇತ್ರದಲ್ಲಿ ಪರಮಶಿವನಿಗೆ ನೆರವೇರಿಸಲಾಗುವ ವಿವಿಧ ಆರಾಧನೆಗಳಲ್ಲಿ ಪಾಲ್ಗೊಳ್ಳುವ ಅವಕಾಶ ನಿಮಗೆ ಸಿಕ್ಕರೆ ಹೇಗಿರುತ್ತದೆ? ವೇದಮಂದಿರ ನಿಮಗೆ ಈ ಸದವಕಾಶವನ್ನು ಕಲ್ಪಿಸುತ್ತಿದೆ. ಈ ಅಪರೂಪದ ಆರಾಧನೆಯಲ್ಲಿ ನೀವು ಭಾಗಿಯಾಗಿ ಅಪಮೃತ್ಯು ಭಯ ದೂರವಾಗಲೆಂದು, ಆಯುರಾರೋಗ್ಯ ಸಿದ್ಧಿಸಲೆಂದು ಹಾಗೂ ಗ್ರಹಪೀಡೆಗಳಿಂದ ಉಪಶಮನ ಸಿಗಲೆಂದು ಶಿವನನ್ನು ಪ್ರಾರ್ಥಿಸಬಹುದು. ವಿವಾಹ, ಸಂತಾನ, ಐಶ್ವರ್ಯ ಮತ್ತು ಕುಟುಂಬ ಸೌಖ್ಯ ಲಭಿಸಲೆಂದು ಪರಮಶಿವನನ್ನು ಬೇಡಿಕೊಳ್ಳಬಹುದು. ಈ ಆರಾಧನೆಯಲ್ಲಿ ರುದ್ರಹೋಮ,ಮಹಾಮೃತ್ಯುಂಜಯ ಮಂತ್ರಸ್ಮರಣೆ, 1,116 ಪಾರ್ಥಿವ ಲಿಂಗಗಳಿಗೆ ಅಭಿಷೇಕ ಹಾಗೂ ಶಿವಪಾರ್ವತಿಯರ ಕಲ್ಯಾಣೋತ್ಸವವನ್ನು ನೆರವೇರಿಸಲಾಗುತ್ತದೆ.
ಸಕಲ ಶುಭಗಳಿಗಾಗಿ ‘ರುದ್ರಹೋಮ’
ನಿಮ್ಮ ಜೀವನದಲ್ಲಿ ಸಾಲುಸಾಲು ಸಮಸ್ಯೆಗಳು ಎದುರಾಗುತ್ತಿವೆಯೇ? ಗ್ರಹಪೀಡೆಗಳು, ಪಿತೃದೋಷಗಳು ಮತ್ತು ಅನಾರೋಗ್ಯ ಸಮಸ್ಯೆಗಳಿಂದ ತೊಂದರೆ ಅನುಭವಿಸುತ್ತಿದ್ದೀರಾ? ಇಂತಹ ಬಾಧೆಗಳಿಂದ ಉಪಶಮನ ಸಿಗಲೆಂದು ಪರಮಶಿವನನ್ನು ರುದ್ರಹೋಮದ ಮೂಲಕ ಪ್ರಾರ್ಥಿಸಬಹುದು. ಶ್ರೀರುದ್ರ ನಮಕ, ಚಮಕ ಮಂತ್ರಗಳನ್ನು ಪಠಿಸುತ್ತಾ ಈ ಹೋಮವನ್ನು ನೆರವೇರಿಸಲಾಗುತ್ತದೆ. ಅಗ್ನಿಗೆ ಪವಿತ್ರವಾದ ಪೂಜಾದ್ರವ್ಯಗಳನ್ನು ಸಮರ್ಪಿಸುತ್ತಾ ರುದ್ರನನ್ನು ಆರಾಧಿಸಲಾಗುತ್ತದೆ. ನಿಮಗೆ ಮತ್ತು ನಿಮ್ಮ ಕುಟುಂಬ ಸದಸ್ಯರಿಗೆ ಆಯುರಾರೋಗ್ಯ ಸಿದ್ಧಿಸಲೆಂದು, ಅಪಮೃತ್ಯು ಭಯಗಳು ದೂರವಾಗಲೆಂದು, ಆರ್ಥಿಕ ತೊಂದರೆಗಳು ಕಡಿಮೆಯಾಗಿ ಮನೆಯಲ್ಲಿ ಸುಖ-ಶಾಂತಿ ನೆಲೆಸಲೆಂದು ಸಂಕಲ್ಪ ಮಾಡಿಸಿಕೊಳ್ಳಬಹುದು.
ದೀರ್ಘಾಯುಷ್ಯಕ್ಕಾಗಿ ‘ಮಹಾಮೃತ್ಯುಂಜಯ ಮಂತ್ರ’
ನಿಮ್ಮ ಕುಟುಂಬದಲ್ಲಿ ಹಿರಿಯರು, ಮಕ್ಕಳು, ಜೀವನ ಸಂಗಾತಿ ಸೇರಿದಂತೆ ಎಲ್ಲರೂ ಆರೋಗ್ಯವಾಗಿರಬೇಕೆಂದು ಬಯಸುತ್ತಿದ್ದೀರಾ? ಅನಾರೋಗ್ಯ ಬಾಧೆಗಳು ದೂರವಾಗಿ ಸಂಪೂರ್ಣ ಆಯುರಾರೋಗ್ಯ ಲಭಿಸಲೆಂದು ಪ್ರಾರ್ಥಿಸುತ್ತಿದ್ದೀರಾ? ಹಾಗಾದರೆ ಮಹಾಮೃತ್ಯುಂಜಯ ಮಂತ್ರಸ್ಮರಣೆಯಲ್ಲಿ ಪಾಲ್ಗೊಳ್ಳಿ. ‘ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಮ್’ ಎಂದು ಸಾಗುವ ಈ ಮಹಾಮಂತ್ರವು ಪರಮಶಿವನ ಮೃತ್ಯುಂಜಯ ಸ್ವರೂಪವನ್ನು ಸ್ತುತಿಸುತ್ತದೆ. ಋಗ್ವೇದದಲ್ಲಿ ಉಲ್ಲೇಖಿಸಿರುವ ಈ ಮಂತ್ರವನ್ನು ಭಕ್ತಿಯಿಂದ ಸ್ಮರಿಸುತ್ತಾ ಅಪಮೃತ್ಯು ಭಯಗಳಿಂದ ಉಪಶಮನ, ರೋಗಬಾಧೆಗಳಿಂದ ವಿಮುಕ್ತಿ ಹಾಗೂ ದೀರ್ಘಾಯುಷ್ಯ ಲಭಿಸಲೆಂದು ಪ್ರಾರ್ಥಿಸಬಹುದು. ನಿಮ್ಮ ಕುಟುಂಬ ಸದಸ್ಯರ ಆರೋಗ್ಯ ಮತ್ತು ಕ್ಷೇಮಕ್ಕಾಗಿ ಈ ಆರಾಧನೆಯಲ್ಲಿ ಪಾಲ್ಗೊಳ್ಳಬಹುದು.
ವಿವಾಹ ಮತ್ತು ದಾಂಪತ್ಯಕ್ಕಾಗಿ ‘ಶಿವಪಾರ್ವತಿಯರ ಕಲ್ಯಾಣ’
ನಿಮಗೆ ವಿವಾಹ ವಿಳಂಬವಾಗುತ್ತಿದೆಯೇ? ಉತ್ತಮ ಜೀವನ ಸಂಗಾತಿ ದೊರೆಯಬೇಕೆಂದು ಬಯಸುತ್ತಿದ್ದೀರಾ? ಹಾಗಾದರೆ ಉಮಾಮಹೇಶ್ವರರನ್ನು ಭಕ್ತಿಯಿಂದ ಆರಾಧಿಸುವುದರಿಂದ ವಿಶೇಷ ಫಲಗಳು ಲಭಿಸುತ್ತವೆ ಎಂದು ಪುರಾಣಗಳು ಹೇಳುತ್ತವೆ. ಶಿವಪಾರ್ವತಿಯರ ದಿವ್ಯ ಕಲ್ಯಾಣವು ಆದರ್ಶ ದಾಂಪತ್ಯಕ್ಕೆ ಪ್ರತೀಕವಾಗಿರುವುದರಿಂದ, ಅವರ ಕಲ್ಯಾಣೋತ್ಸವದಲ್ಲಿ ಪಾಲ್ಗೊಂಡು ನಿಮಗೆ ತಕ್ಕ ಜೀವನ ಸಂಗಾತಿ ಸಿಗಲೆಂದು, ದಾಂಪತ್ಯ ಜೀವನದಲ್ಲಿ ಪ್ರೇಮಾನುರಾಗಗಳು ಹೆಚ್ಚಾಗಲೆಂದು ಹಾಗೂ ಸಂತಾನ ಭಾಗ್ಯ ಲಭಿಸಲೆಂದು ಪ್ರಾರ್ಥಿಸಬಹುದು. ಕುಟುಂಬದಲ್ಲಿನ ಕಲಹಗಳು ದೂರವಾಗಿ ಐಕ್ಯತೆ ಮತ್ತು ಸಂತೋಷ ನೆಲೆಸಲೆಂದೂ ಸಹ ಶಿವಪಾರ್ವತಿಯರನ್ನು ಬೇಡಿಕೊಳ್ಳಬಹುದು.
ಶಿವಾನುಗ್ರಹದಿಂದ ಶತ್ರುಬಾಧೆಗಳಿಂದ ಉಪಶಮನ
ನೀವು ಮಾಡುತ್ತಿರುವ ಕೆಲಸಗಳಲ್ಲಿ ಪದೇ ಪದೇ ಅಡೆತಡೆಗಳು ಎದುರಾಗುತ್ತಿವೆಯೇ? ಶತ್ರುಗಳಿಂದ ತೊಂದರೆ ಅನುಭವಿಸುತ್ತಿದ್ದೀರಾ? ಎಷ್ಟೇ ಪ್ರಯತ್ನಿಸಿದರೂ ಅಂದುಕೊಂಡ ಯಶಸ್ಸು ಸಿಗುತ್ತಿಲ್ಲವೇ? ಇಂತಹ ಸಂದರ್ಭಗಳಲ್ಲಿ ಪರಮಶಿವನನ್ನು ಸ್ಮರಿಸುವುದರಿಂದ ಉತ್ತಮ ಫಲಗಳು ಲಭಿಸುತ್ತವೆ ಎಂಬ ನಂಬಿಕೆಯಿದೆ. ಆತನ ಆರಾಧನೆಯಿಂದ ಕಷ್ಟಗಳನ್ನು ಎದುರಿಸುವ ಧೈರ್ಯ, ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಆತ್ಮವಿಶ್ವಾಸ ಮತ್ತು ಪ್ರತಿಕೂಲ ಪರಿಸ್ಥಿತಿಗಳನ್ನು ಮೆಟ್ಟಿನಿಲ್ಲುವ ಮನೋಬಲ ದೊರೆಯುತ್ತದೆ ಎಂದು ಪಂಡಿತರು ಹೇಳುತ್ತಾರೆ. ರುದ್ರನ ಆರಾಧನೆಯಲ್ಲಿ ನಿಮಗೆ ಎದುರಾಗುವ ಶತ್ರುಬಾಧೆಗಳಿಂದ ಉಪಶಮನ ಸಿಗಲೆಂದು, ಕೈಗೊಂಡ ಕೆಲಸಗಳು ನಿರ್ವಿಘ್ನವಾಗಿ ಸಾಗಲೆಂದು ಹಾಗೂ ಪ್ರತಿಯೊಂದು ಪ್ರಯತ್ನದಲ್ಲೂ ಯಶಸ್ಸು ಸಿದ್ಧಿಸಲೆಂದು ಸಂಕಲ್ಪ ಮಾಡಿಸಿಕೊಳ್ಳಬಹುದು.
ಕುಟುಂಬದ ಕ್ಷೇಮಕ್ಕಾಗಿ 1,116 ಪಾರ್ಥಿವ ಶಿವಲಿಂಗಗಳಿಗೆ ಅಭಿಷೇಕ
ನಿಮ್ಮ ಕುಟುಂಬ ಸದಸ್ಯರೆಲ್ಲರಿಗೂ ಆಯುರಾರೋಗ್ಯ ಲಭಿಸಲೆಂದು, ಆರ್ಥಿಕ ತೊಂದರೆಗಳು ದೂರವಾಗಲೆಂದು ಹಾಗೂ ಮಕ್ಕಳು ವಿದ್ಯಾಭ್ಯಾಸ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಬೇಕೆಂದು ಬಯಸುತ್ತಿದ್ದೀರಾ? ಹಾಗಾದರೆ 1,116 ಪಾರ್ಥಿವ ಶಿವಲಿಂಗಗಳಿಗೆ ನಡೆಯುವ ಈ ವಿಶೇಷ ಅಭಿಷೇಕದಲ್ಲಿ ಪಾಲ್ಗೊಳ್ಳಿ. ಮಣ್ಣಿನಿಂದ ತಯಾರಿಸಿದ ಪ್ರತಿಯೊಂದು ಶಿವಲಿಂಗವನ್ನೂ ಪರಮಶಿವನ ಸ್ವರೂಪವೆಂದು ಭಾವಿಸಿ ಭಕ್ತಿಯಿಂದ ಅಭಿಷೇಕಗಳನ್ನು ಸಮರ್ಪಿಸಬಹುದು. ಈ ಅಭಿಷೇಕದ ಸಮಯದಲ್ಲಿ ನಿಮ್ಮ ಕುಟುಂಬಕ್ಕಾಗಿ ವಿಶೇಷವಾಗಿ ಸಂಕಲ್ಪ ಮಾಡಿಸಿಕೊಳ್ಳಬಹುದು. ಮನೆಯಲ್ಲಿ ಸುಖ-ಸಂತೋಷಗಳು ನೆಲೆಸಲೆಂದು, ಸಂಪತ್ತು ಸ್ಥಿರವಾಗಿರಲೆಂದು, ಕುಟುಂಬ ಸದಸ್ಯರ ನಡುವೆ ಅನುರಾಗ ಹೆಚ್ಚಾಗಲೆಂದು ಮತ್ತು ಕೈಗೊಂಡ ಕೆಲಸಗಳೆಲ್ಲವೂ ಯಶಸ್ವಿಯಾಗಲೆಂದು ಪರಮೇಶ್ವರನನ್ನು ಪ್ರಾರ್ಥಿಸಬಹುದು.
ಶ್ರೀಶೈಲ ಕ್ಷೇತ್ರದಲ್ಲಿ ಶಿವಾರಾಧನೆ
ಶ್ರೀಶೈಲವು ಕೇವಲ ಪುಣ್ಯಕ್ಷೇತ್ರವಷ್ಟೇ ಅಲ್ಲ.. ಪರಮಶಿವನು ಮಲ್ಲಿಕಾರ್ಜುನನಾಗಿ, ಅಮ್ಮನವರು ಭ್ರಮರಾಂಬಿಕಾದೇವಿಯಾಗಿ ನೆಲೆಸಿರುವ ದಿವ್ಯಧಾಮವಾಗಿದೆ. ಇಲ್ಲಿನ ಕ್ಷೇತ್ರ ಮಹಾತ್ಮೆಯು ಶಿವಪುರಾಣಗಳು ಮತ್ತು ಸ್ಥಳಪುರಾಣಗಳಲ್ಲಿ ವಿಶೇಷವಾಗಿ ವರ್ಣಿಸಲ್ಪಟ್ಟಿದೆ. ಅಂತಹ ಪವಿತ್ರ ಕ್ಷೇತ್ರದಲ್ಲಿ ಕಾರ್ತಿಕ ಹುಣ್ಣಿಮೆಯ (ಪೌರ್ಣಮಿ) ದಿನದಂದು ನಡೆಯುವ ಶಿವಾರಾಧನೆಯಲ್ಲಿ ನೀವೂ ಸಹ ಪಾಲ್ಗೊಳ್ಳಬಹುದು. ನಿಮ್ಮ ಕುಟುಂಬದ ಹೆಸರಿನಲ್ಲಿ ಸಂಕಲ್ಪ ಮಾಡಿಸಿಕೊಂಡು, ರುದ್ರಮಂತ್ರಗಳ ಸ್ಮರಣೆಯೊಂದಿಗೆ ನಡೆಯುವ ಹೋಮಗಳು, ಅಭಿಷೇಕಗಳು ಮತ್ತು ಉಮಾಮಹೇಶ್ವರರ ಕಲ್ಯಾಣೋತ್ಸವದಲ್ಲಿ ಭಾಗಿಯಾಗಬಹುದು. ಶ್ರೀಶೈಲ ಕ್ಷೇತ್ರದ ಪವಿತ್ರತೆಯನ್ನು ಸ್ಮರಿಸುತ್ತಾ ಪರಮೇಶ್ವರನನ್ನು ಮನಃಪೂರ್ವಕವಾಗಿ ಪ್ರಾರ್ಥಿಸುವ ಈ ಸದವಕಾಶವನ್ನು ಕಳೆದುಕೊಳ್ಳಬೇಡಿ. ಪೂಜೆಗಳನ್ನು ಶ್ರೀಶೈಲ ಕ್ಷೇತ್ರದ ಪವಿತ್ರ ವೈದಿಕ ಯಾಗಶಾಲೆಯಲ್ಲಿ ನಡೆಸಲಾಗುತ್ತದೆ.
ಈ ಕಾರ್ತಿಕ ಪೌರ್ಣಮಿ ಪ್ರಯುಕ್ತ ಪುಣ್ಯ ಸಂದರ್ಭದಲ್ಲಿ ವೇದಮಂದಿರ್ ವತಿಯಿಂದ ನವೆಂಬರ್ 24 ರಂದು ಆಯೋಜಿಸಿರುವ "1116 ಪಾರ್ಥಿವ ಶಿವಲಿಂಗಗಳಿಗೆ ಅಭಿಷೇಕ...ರುದ್ರ ಹೋಮ..ಶಿವಪಾರ್ವತಿಯರ ದಿವ್ಯ ಕಲ್ಯಾಣ"
ದಲ್ಲಿ , ನಿಮ್ಮ ಹೆಸರು ಮತ್ತು ಗೋತ್ರದೊಂದಿಗೆ ಸಂಕಲ್ಪ ಮಾಡಿಸಿ, ವಿಘ್ನನಿವಾರಕನ ದಿವ್ಯ ಅನುಗ್ರಹಕ್ಕೆ ಪಾತ್ರರಾಗಿ. ಪೂಜೆ ನೆರವೇರಿದ ಬಳಿಕ, ಪೂಜೆಯ ಸಂಪೂರ್ಣ ವಿಡಿಯೋ —48 ಗಂಟೆಗಳಲ್ಲಿ ನಿಮ್ಮ WhatsAppಗೆ ಕಳುಹಿಸಲಾಗುತ್ತದೆ.