ರಾಹು ಕೇತು ಗೋಚಾರ ವಿಶೇಷ

ರಾಹುಕಾಲ ವಿಶೇಷ ರಾಹುಕೇತು ಶಾಂತಿ ಹೋಮ

  • ಕಾಲಸರ್ಪ ದೋಷ
  • ರಾಹು ದೋಷ
  • ವಿವಾಹ ವಿಳಂಬ
ಬಟುಕ ಭೈರವ ಸೋಮೇಶ್ವರ ದೇವಾಲಯ,, ಶ್ರೀಕಾಳಹಸ್ತಿ ಕ್ಷೇತ್ರ
ಶನಿವಾರ, 5 ಡಿಸೆಂಬರ್ | ಶುಭ ಮುಹೂರ್ತ
00days:00hrs:00mins:00secs
Muhurat ends in

10K+pujas conducted

Puja Video Delivered Within 48 Hours

Verified & Experienced Purohits

Pujas Performed in Sacred Temples

100% Authentic Vedic Rituals

Participate Now

You won't be charged yet

Puja Video Delivered Within 48 Hours

Verified & Experienced Purohits

Pujas Performed in Sacred Temples

100% Authentic Vedic Rituals

ಪೂಜೆಯ ಬಗ್ಗೆ

ಗ್ರಹಗಳ ಸ್ಥಾನಗಳು ಬದಲಾದಾಗ ಜೀವನದಲ್ಲಿ ಹೊಸ ಬೆಳವಣಿಗೆಗಳಿಗೆ ಸಮಯ ಸನ್ನಿಹಿತವಾಗುತ್ತದೆ. ಈಗ ಅಂತಹದೇ ಒಂದು ಮಹತ್ವದ ಕ್ಷಣ ಬರುತ್ತಿದೆ. 18 ವರ್ಷಗಳ ನಂತರ 2026ರ ಡಿಸೆಂಬರ್ 5ರಂದು ರಾಹುವು ಕುಂಭರಾಶಿಯಿಂದ ಮಕರರಾಶಿಗೆ, ಕೇತುವು ಸಿಂಹರಾಶಿಯಿಂದ ಕರ್ಕಾಟಕರಾಶಿಗೆ ಪ್ರವೇಶಿಸಲಿದ್ದಾರೆ. ಜೀವನದ ಹಾದಿಯ ಮೇಲೆ ಪ್ರಭಾವ ಬೀರಬಲ್ಲ ಈ ಪ್ರಮುಖ ಬದಲಾವಣೆಯನ್ನೇ ‘ರಾಹು–ಕೇತುಗಳ ಗೋಚಾರ’ ಎಂದು ಕರೆಯಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ದೃಷ್ಟಿಯಿಂದ ಅತ್ಯಂತ ಮಹತ್ವವಾದ ಈ ಗ್ರಹಸಂಚಾರದಿಂದ ಉಂಟಾಗುವ ಪ್ರತಿಕೂಲ ಪರಿಣಾಮಗಳಿಂದ ಉಪಶಮನ ಪಡೆಯಲು ಹಾಗೂ ಅವುಗಳ ಅನುಕೂಲತೆಗಾಗಿ ಗ್ರಹಶಾಂತಿ ಆರಾಧನೆ ಮಾಡುವುದು ಮುಖ್ಯ ಎಂದು ಜ್ಯೋತಿಷ್ಯರು ಮತ್ತು ಪಂಡಿತರು ಹೇಳುತ್ತಾರೆ. ಅದಕ್ಕಾಗಿಯೇ ಶ್ರೀಕಾಳಹಸ್ತಿಯ ಬಟುಕಭೈರವ ಸೋಮೇಶ್ವರ ದೇವಾಲಯದಲ್ಲಿ ಕಾಲಸರ್ಪ ದೋಷ ನಿವಾರಣೆ ಮತ್ತು ರಾಹುಕೇತು ಶಾಂತಿ ಹೋಮವನ್ನು ಆಯೋಜಿಸಲಾಗಿದೆ. ಮುಂಬರುವ ಗ್ರಹಬದಲಾವಣೆಯ ಸಮಯದಲ್ಲಿ ದೈವಸನ್ನಿಧಿಯಲ್ಲಿ ಪ್ರಾರ್ಥಿಸಿ, ರಾಹು–ಕೇತುಗಳ ಅನುಗ್ರಹವನ್ನು ಬೇಡಿರಿ.

ರಾಹು–ಕೇತುಗಳ ಗೋಚರ ರಹಸ್ಯ  - ಭೌತಿಕ ಗ್ರಹಗಳಲ್ಲದಿದ್ದರೂ ಜ್ಯೋತಿಷ್ಯದಲ್ಲಿ ರಾಹು ಮತ್ತು ಕೇತುಗಳಿಗೆ ವಿಶೇಷ ಸ್ಥಾನವಿದೆ. ರಾಹುವು ಆಸೆಗಳು, ಮಹತ್ವಾಕಾಂಕ್ಷೆಗಳು ಮತ್ತು ಭೌತಿಕ ಬಯಕೆಗಳ ಸಂಕೇತವಾದರೆ.. ಕೇತುವು ವೈರಾಗ್ಯ ಮತ್ತು ಆಧ್ಯಾತ್ಮಿಕ ಚಿಂತನೆಯ ಪ್ರತೀಕ. ಯಾವಾಗಲೂ ಪರಸ್ಪರ 180 ಡಿಗ್ರಿಗಳ ಅಂತರದಲ್ಲಿ ಸಂಚರಿಸುವ ಈ ಛಾಯಾಗ್ರಹಗಳ ರಾಶಿ ಬದಲಾವಣೆಯು ಜೀವನದ ಹಲವು ಕ್ಷೇತ್ರಗಳ ಮೇಲೆ ಪ್ರಭಾವ ಬೀರಬಲ್ಲ ಪ್ರಮುಖ ಗೋಚಾರವೆಂದು ಪರಿಗಣಿಸಲಾಗುತ್ತದೆ. ಈ ಬಾರಿ ರಾಹುವು ಶನಿಯ ಅಧಿಪತ್ಯದ ಮಕರರಾಶಿಗೆ, ಕೇತುವು ಚಂದ್ರನ ಅಧಿಪತ್ಯದ ಕರ್ಕಾಟಕರಾಶಿಗೆ ಪ್ರವೇಶಿಸುತ್ತಿದ್ದಾರೆ. ಕರ್ಮ ಮತ್ತು ಜವಾಬ್ದಾರಿಗಳಿಗೆ ಶನಿ.. ಮನಸ್ಸು ಮತ್ತು ಕೌಟುಂಬಿಕ ಸೌಖ್ಯಕ್ಕೆ ಚಂದ್ರ ಕಾರಣರಾಗಿದ್ದಾರೆ. ಇಂತಹ ಗ್ರಹಬದಲಾವಣೆಯ ಸಮಯದಲ್ಲಿ ರಾಹು–ಕೇತುಗಳ ಅನುಕೂಲತೆಗಾಗಿ ದೇವರ ಮೊರೆ ಹೋಗಿ ಗ್ರಹಶಾಂತಿ ಆರಾಧನೆ ಮಾಡುವುದು ವಿಶೇಷ ಎಂದು ಜ್ಯೋತಿಷ್ಯರು ಹೇಳುತ್ತಾರೆ. ಕಾಲಸರ್ಪ ದೋಷ ನಿವಾರಣೆ ಮತ್ತು ರಾಹುಕೇತು ಶಾಂತಿ ಹೋಮದ ಮೂಲಕ ಗ್ರಹಬಾಧೆಗಳ ಶಾಂತಿ, ಕೌಟುಂಬಿಕ ಸೌಖ್ಯ, ವೃತ್ತಿ ಅಭಿವೃದ್ಧಿ ಮತ್ತು ಮನೋಸ್ಥೈರ್ಯಕ್ಕಾಗಿ ಸ್ವಾಮಿಯ ಅನುಗ್ರಹವನ್ನು ಪ್ರಾರ್ಥಿಸಬಹುದು.  

ಈ ರಾಶಿಗಳವರಿಗೆ ಪ್ರತಿಕೂಲ ಪ್ರಭಾವ 

ಈ ಗೋಚಾರದಲ್ಲಿ ಕೆಲವು ರಾಶಿಗಳವರಿಗೆ ವಿಶೇಷವಾದ ಗ್ರಹಸ್ಥಿತಿಗಳು ಉಂಟಾಗುತ್ತಿವೆ ಎಂದು ಜ್ಯೋತಿಷ್ಯರು ಹೇಳುತ್ತಾರೆ.

ಮೇಷರಾಶಿ: ರಾಹುವು 10ನೇ ಸ್ಥಾನಕ್ಕೆ ಬರುವುದರಿಂದ ಉದ್ಯೋಗ, ವೃತ್ತಿ ಮತ್ತು ವ್ಯಾಪಾರದಲ್ಲಿ ಹೊಸ ಅವಕಾಶಗಳು ಹಾಗೂ ಬದಲಾವಣೆಗಳನ್ನು ಗಮನಿಸಬೇಕು. ಕೇತುವು 4ನೇ ಸ್ಥಾನದಲ್ಲಿ ಇರುವುದರಿಂದ ಗೃಹಸುಖ ಮತ್ತು ಕುಟುಂಬದ ವಾತಾವರಣದ ಬಗ್ಗೆ ಗಮನ ಅಗತ್ಯ. 

ಮಿಥುನರಾಶಿ: ರಾಹುವು 8ನೇ ಸ್ಥಾನಕ್ಕೆ, ಕೇತುವು 2ನೇ ಸ್ಥಾನಕ್ಕೆ ಬರುವುದರಿಂದ ಆಕಸ್ಮಿಕ ಬೆಳವಣಿಗೆಗಳು, ಆರ್ಥಿಕ ವ್ಯವಹಾರಗಳು ಮತ್ತು ಕೌಟುಂಬಿಕ ಸಂಬಂಧಗಳನ್ನು ಎಚ್ಚರಿಕೆಯಿಂದ ಗಮನಿಸಬೇಕು. 

ಕರ್ಕಾಟಕರಾಶಿ: ರಾಹುವು 7ನೇ ಸ್ಥಾನಕ್ಕೆ, ಕೇತುವು ಜನ್ಮರಾಶಿಗೆ ಬರುವುದರಿಂದ ವಿವಾಹ, ಪಾಲುದಾರಿಕೆಗಳು ಮತ್ತು ವೈಯಕ್ತಿಕ ನಿರ್ಧಾರಗಳು ಮುಖ್ಯವಾಗುತ್ತವೆ. 

ತುಲಾರಾಶಿ: ರಾಹುವು 4ನೇ ಸ್ಥಾನಕ್ಕೆ, ಕೇತುವು 10ನೇ ಸ್ಥಾನಕ್ಕೆ ಬರುವುದರಿಂದ ಮನೆ, ಆಸ್ತಿಗಳು, ಉದ್ಯೋಗ ಮತ್ತು ವೃತ್ತಿಪರ ಗುರಿಗಳ ವಿಷಯದಲ್ಲಿ ಬದಲಾವಣೆಗಳನ್ನು ಗಮನಿಸಬೇಕು. 

ಮಕರರಾಶಿ: ರಾಹುವು ಜನ್ಮರಾಶಿಗೆ, ಕೇತುವು 7ನೇ ಸ್ಥಾನಕ್ಕೆ ಬರುವುದರಿಂದ ವೈಯಕ್ತಿಕ ನಿರ್ಧಾರಗಳು, ಆರೋಗ್ಯದ ಅಭ್ಯಾಸಗಳು ಹಾಗೂ ವೈವಾಹಿಕ ಮತ್ತು ಪಾಲುದಾರಿಕೆ ಸಂಬಂಧಗಳ ಬಗ್ಗೆ ಗಮನ ಅಗತ್ಯ. 

ಕಾಲಸರ್ಪ ದೋಷ ಪ್ರಭಾವಗಳಿಂದ ವಿಮುಕ್ತಿ -  ಜಾತಕದಲ್ಲಿ ರಾಹು ಮತ್ತು ಕೇತುಗಳ ನಡುವೆ ಉಳಿದ 7 ಗ್ರಹಗಳು ಒಂದು ಕಡೆ ಇರುವಾಗ ಕಾಲಸರ್ಪ ಯೋಗ ಉಂಟಾಗುತ್ತದೆ. ಜ್ಯೋತಿಷ್ಯ ಸಂಪ್ರದಾಯದ ಪ್ರಕಾರ ಇದು 12 ವಿಧಗಳಾಗಿರುತ್ತದೆ. ಅನಂತ, ಕುಲಿಕ, ವಾಸುಕಿ, ಶಂಖಪಾಲ, ಪದ್ಮ, ಮಹಾಪದ್ಮ, ತಕ್ಷಕ, ಕರ್ಕೋಟಕ, ಶಂಖಚೂಡ, ಘಾತಕ, ವಿಷಧರ, ಶೇಷನಾಗ ಎಂಬ ಈ ಯೋಗಗಳು ಜಾತಕ ಚಕ್ರದಲ್ಲಿ ರೂಪುಗೊಂಡ ಸ್ಥಾನಕ್ಕೆ ಅನುಗುಣವಾಗಿ ವಿಭಿನ್ನ ಸ್ವಭಾವಗಳನ್ನು ಹೊಂದಿರುತ್ತವೆ. ಪ್ರತಿಯೊಂದು ಯೋಗಕ್ಕೂ ರಾಹು–ಕೇತುಗಳ ಸ್ಥಾನ ಮತ್ತು ಅವುಗಳ ನಡುವಿನ ಗ್ರಹಗಳ ಜೋಡಣೆಯ ಆಧಾರದ ಮೇಲೆ ಹೆಸರು ಬರುತ್ತದೆ. ಜ್ಯೋತಿಷ್ಯ ವಿಶ್ಲೇಷಣೆಯಲ್ಲಿ ಇವನ್ನು ವಿವಾಹದಲ್ಲಿ ವಿಳಂಬ, ಉದ್ಯೋಗದಲ್ಲಿ ಸ್ಥಿರತೆಯ ಕೊರತೆ, ಆರ್ಥಿಕ ಏರಿಳಿತಗಳು ಮತ್ತು ಸಂತಾನ ಸಂಬಂಧಿತ ಆತಂಕಗಳಂತಹ ಸಮಸ್ಯೆಗಳೊಂದಿಗೆ ಜೋಡಿಸಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಕಾಲಸರ್ಪ ಯೋಗ ಶಾಂತಿಗಾಗಿ ನಾಗದೇವತೆಗಳ ಆರಾಧನೆ, ರಾಹು–ಕೇತು ಪೂಜೆಗಳು ಮತ್ತು ಹೋಮಗಳನ್ನು ನಡೆಸುವುದು ಶಾಸ್ತ್ರೋಕ್ತ ಪರಿಹಾರ ಮಾರ್ಗವೆಂದು ಪರಿಗಣಿಸಲಾಗುತ್ತದೆ.

ಗ್ರಹಬಾಧೆಗಳ ಶಾಂತಿಗೆ ಶಾಸ್ತ್ರೋಕ್ತ ಹೋಮ - ಕಾಲಸರ್ಪ ದೋಷ ನಿವಾರಣೆ ಮತ್ತು ರಾಹುಕೇತು ಶಾಂತಿ ಹೋಮಗಳನ್ನು ನಿಗದಿತ ವೈದಿಕ ವಿಧಾನದಲ್ಲಿ ನಡೆಸಲಾಗುತ್ತದೆ. ಮೊದಲು ವಿಘ್ನಗಳು ನಿವಾರಣೆಯಾಗಲೆಂದು ಗಣಪತಿ ಪೂಜೆ, ಪೂಜಾ ಸ್ಥಳದ ಪವಿತ್ರತೆಗಾಗಿ ಪುಣ್ಯಾಹವಾಚನ ಮಾಡಲಾಗುತ್ತದೆ. ತದನಂತರ ಕಲಶ ಸ್ಥಾಪನೆ ಮಾಡಿ, ಭಕ್ತರ ಗೋತ್ರನಾಮಗಳು, ಜನ್ಮನಕ್ಷತ್ರ ಮತ್ತು ರಾಶಿ ವಿವರಗಳೊಂದಿಗೆ ಸಂಕಲ್ಪ ಹೇಳಲಾಗುತ್ತದೆ. ಆ ಬಳಿಕ ರಾಹು–ಕೇತುಗಳಿಗೆ ಆವಾಹನೆ, ಅರ್ಚನೆ ಮತ್ತು ವಿಶೇಷ ಮಂತ್ರಜಪಗಳನ್ನು ನೆರವೇರಿಸಲಾಗುತ್ತದೆ. ಕಾಲಸರ್ಪ ದೋಷ ನಿವಾರಣೆಯ ಭಾಗವಾಗಿ ನಾಗದೇವತೆಗಳನ್ನೂ ಆರಾಧಿಸಿ, ಅವರ ಅನುಗ್ರಹವನ್ನು ಕೋರಲಾಗುತ್ತದೆ. ಕೊನೆಯಲ್ಲಿ ವೈದಿಕ ಮಂತ್ರೋಚ್ಛಾರಗಳ ನಡುವೆ ಹೋಮಾಗ್ನಿಗೆ ನಿಗದಿತ ಆಹುತಿಗಳನ್ನು ಸಮರ್ಪಿಸಿ ಪೂರ್ಣಾಹುತಿಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಗುತ್ತದೆ. ಈ ಸಂಪೂರ್ಣ ಪೂಜಾ ಕ್ರಮದಲ್ಲಿ ಗ್ರಹಶಾಂತಿ, ಕಾಲಸರ್ಪ ಯೋಗ ಶಾಂತಿ ಮತ್ತು ನಾಗದೇವತೆಗಳ ಅನುಗ್ರಹಕ್ಕಾಗಿ ಭಕ್ತರು ತಮ್ಮ ಗೋತ್ರನಾಮಗಳೊಂದಿಗೆ ಸಂಕಲ್ಪ ಮಾಡಿಕೊಳ್ಳುತ್ತಾರೆ.  

ಆಪತ್ತುಗಳಿಂದ ರಕ್ಷಣೆಗಾಗಿ.. ಶ್ರೀಕಾಳಹಸ್ತಿ ಕ್ಷೇತ್ರದಲ್ಲಿ ಹೋಮ - ರಾಹು–ಕೇತು ಆರಾಧನೆಗೆ ಪ್ರಸಿದ್ಧವಾದ ಶ್ರೀಕಾಳಹಸ್ತಿ ಕ್ಷೇತ್ರದಲ್ಲಿ ಗ್ರಹಶಾಂತಿಗಾಗಿ ದೇವರನ್ನು ಆಶ್ರಯಿಸುವುದು ಒಂದು ಮಹತ್ವದ ಆಧ್ಯಾತ್ಮಿಕ ಅವಕಾಶವಾಗಿದೆ. ಇಲ್ಲಿ ನೆಲೆಸಿರುವ ಬಟುಕಭೈರವ ಸ್ವಾಮಿಯ ರಕ್ಷಣೆಯನ್ನು ಬೇಡುತ್ತಾ, ಸೋಮೇಶ್ವರ ಸ್ವಾಮಿಯ ಕೃಪೆಗಾಗಿ ಪ್ರಾರ್ಥಿಸುತ್ತಾ ಕಾಲಸರ್ಪ ದೋಷ ನಿವಾರಣೆ ಮತ್ತು ರಾಹುಕೇತು ಶಾಂತಿ ಹೋಮವನ್ನು ನಡೆಸಲಾಗುತ್ತಿದೆ. ಈ ಬಾರಿ ಕೇತುವು ಚಂದ್ರನ ಅಧಿಪತ್ಯದ ಕರ್ಕಾಟಕ ರಾಶಿಗೆ ಪ್ರವೇಶಿಸುತ್ತಿರುವ ಸಮಯದಲ್ಲಿ ಸೋಮೇಶ್ವರನ ಸನ್ನಿಧಿಯಲ್ಲಿ ಗ್ರಹಶಾಂತಿ ಸಂಕಲ್ಪ ಮಾಡಿಕೊಳ್ಳುವುದು ಇನ್ನಷ್ಟು ವಿಶೇಷವಾಗಿದೆ. ವೇದಮಂದಿರ್ ಮೂಲಕ ನಿಮ್ಮ ಗೋತ್ರನಾಮಗಳೊಂದಿಗೆ ಈ ಹೋಮದಲ್ಲಿ ಪಾಲ್ಗೊಳ್ಳಬಹುದು. ನೀವು ದೇವಾಲಯಕ್ಕೆ ಬರಲು ಸಾಧ್ಯವಾಗದಿದ್ದರೂ, ನಿಮ್ಮ ಪರವಾಗಿ ಪಂಡಿತರು ಸಂಕಲ್ಪದೊಂದಿಗೆ ಹೋಮವನ್ನು ನೆರವೇರಿಸುತ್ತಾರೆ. ಮುಂಬರುವ ಗ್ರಹಬದಲಾವಣೆಯ ಪ್ರತಿಕೂಲ ಪರಿಣಾಮಗಳಿಂದ ಉಪಶಮನ ಪಡೆದು, ಬಟುಕಭೈರವ ಮತ್ತು ಸೋಮೇಶ್ವರ ಸ್ವಾಮಿಯ ದಿವ್ಯ ಅನುಗ್ರಹ ದೊರೆಯಲೆಂದು ಈ ಪವಿತ್ರ ಹೋಮದಲ್ಲಿ ಸಂಕಲ್ಪ ಮಾಡಿಕೊಳ್ಳಿ.

ವೇದಮಂದಿರದ ವತಿಯಿಂದ ಡಿಸೆಂಬರ್ 5 ಶನಿವಾರ ದಂದು ರಾಹು ಕೇತು ಗೋಚಾರ ವಿಶೇಷ "ರಾಹುಕಾಲ ವಿಶೇಷ ರಾಹುಕೇತು ಶಾಂತಿ ಹೋಮ " ವನ್ನು ಆಯೋಜಿಸಲಾಗಿದೆ. ಇಂದೇ ನಿಮ್ಮ ಹೆಸರು ಮತ್ತು ಗೋತ್ರವನ್ನು ನೊಂದಾಯಿಸಿಕೊಳ್ಳಿ . ಪೂಜೆ ನೆರವೇರಿದ ಬಳಿಕ, ಪೂಜೆಯ ಸಂಪೂರ್ಣ ವಿಡಿಯೋ —48 ಗಂಟೆಗಳಲ್ಲಿ ನಿಮ್ಮ WhatsAppಗೆ ಕಳುಹಿಸಲಾಗುತ್ತದೆ. 

ಪೂಜೆಯ ಪ್ರಯೋಜನಗಳು

1

ಕಾಲಸರ್ಪ ದೋಷ ಶಾಂತಿ

ಜಾತಕದಲ್ಲಿನ ಕಾಲಸರ್ಪ ಯೋಗದಿಂದ ಎದುರಾಗುತ್ತಿವೆ ಎಂದು ಭಾವಿಸಲಾದ ಅಡೆತಡೆಗಳು ಮತ್ತು ವಿಳಂಬಗಳಿಂದ ಉಪಶಮನಕ್ಕಾಗಿ ಪ್ರಾರ್ಥಿಸಬಹುದು.

2

ಮನೋಸ್ಥೈರ್ಯ, ಗ್ರಹಬಾಧೆಗಳ ಶಾಂತಿ

ಅನಗತ್ಯ ಭಯಗಳು ಮತ್ತು ಮಾನಸಿಕ ಆತಂಕಗಳು ದೂರವಾಗಿ, ಮನಸ್ಸಿಗೆ ಪ್ರಶಾಂತತೆ ಹಾಗೂ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುವ ಧೈರ್ಯ ದೊರೆಯಲೆಂದು ಸಂಕಲ್ಪಿಸಬಹುದು.

3

ವಿವಾಹ ಪ್ರಾಪ್ತಿ, ದಾಂಪತ್ಯ ಸೌಖ್ಯ

ವಿವಾಹ ಪ್ರಯತ್ನಗಳಲ್ಲಿ ಎದುರಾಗುವ ಅಡ್ಡಿಗಳು ನಿವಾರಣೆಯಾಗಲೆಂದು ಮತ್ತು ದಾಂಪತ್ಯ ಜೀವನ ಸುಖಸಂತೋಷಗಳಿಂದ ಕೂಡಿರಲೆಂದು ಸಂಕಲ್ಪಿಸಬಹುದು.

4

ವೃತ್ತಿ, ಆರ್ಥಿಕ ಸ್ಥಿರತೆ

ಉದ್ಯೋಗ ಮತ್ತು ವ್ಯವಹಾರದಲ್ಲಿ ಎದುರಾಗುವ ಏರಿಳಿತಗಳು ಕಡಿಮೆಯಾಗಿ, ವೃತ್ತಿಪರ ಅಭಿವೃದ್ಧಿ ಹಾಗೂ ಆರ್ಥಿಕ ಸ್ಥಿರತೆ ದೊರೆಯಲೆಂದು ರಾಹು–ಕೇತುಗಳ ಅನುಗ್ರಹವನ್ನು ಕೋರಬಹುದು.

5

ಕುಟುಂಬ ಕ್ಷೇಮ, ಸಂತಾನ ಸೌಭಾಗ್ಯ

ಕುಟುಂಬದಲ್ಲಿ ಸುಖಶಾಂತಿಗಳು ನೆಲೆಸಲೆಂದು ಮತ್ತು ಸಂತಾನ ಸಂಬಂಧಿತ ಆತಂಕಗಳು ದೂರವಾಗಿ ಶುಭಫಲಗಳಿಗಾಗಿ ನಾಗದೇವತೆಗಳ ಆರಾಧನೆ.

ಪೂಜೆಯ ವಿಧಾನ

1

ವಿಘ್ನೇಶ್ವರ ಪೂಜೆ - ಸಂಕಲ್ಪ

ಗಣಪತಿ ಪೂಜೆ, ಪುಣ್ಯಾಹವಾಚನ ಮತ್ತು ಕಲಶ ಸ್ಥಾಪನೆ ನೆರವೇರಿಸಿ ಭಕ್ತರ ಗೋತ್ರನಾಮಗಳು, ಜನ್ಮನಕ್ಷತ್ರ ಮತ್ತು ರಾಶಿಗಳೊಂದಿಗೆ ಗ್ರಹಶಾಂತಿ ಸಂಕಲ್ಪ ಮಾಡಲಾಗುತ್ತದೆ.

2

ರಾಹು-ಕೇತು ಗ್ರಹಾರಾಧನೆ

ರಾಹು ಮತ್ತು ಕೇತು ಗ್ರಹಗಳಿಗೆ ಆವಾಹನೆ, ಅರ್ಚನೆ ಹಾಗೂ ವಿಶೇಷ ಮಂತ್ರಜಪಗಳನ್ನು ನಡೆಸಿ ಅವುಗಳ ಅನುಕೂಲತೆ ಮತ್ತು ಗ್ರಹಶಾಂತಿಗಾಗಿ ಪ್ರಾರ್ಥಿಸಲಾಗುತ್ತದೆ.

3

ನಾಗದೇವತೆಗಳ ಆರಾಧನೆ

ಕಾಲಸರ್ಪ ಯೋಗ ಶಾಂತಿಗಾಗಿ ನಾಗದೇವತೆಗಳನ್ನು ಪೂಜಿಸಿ, ಅವರ ಅನುಗ್ರಹ ಮತ್ತು ಕುಟುಂಬದ ಕ್ಷೇಮಕ್ಕಾಗಿ ಸಂಕಲ್ಪ ಮಾಡಲಾಗುತ್ತದೆ.

4
✦ The Core Ritual

ರಾಹುಕೇತು ಶಾಂತಿ ಹೋಮ

ವೈದಿಕ ಮಂತ್ರೋಚ್ಚಾರಣೆಯ ನಡುವೆ ಹೋಮಾಗ್ನಿಗೆ ಆಹುತಿಗಳನ್ನು ಸಮರ್ಪಿಸಿ, ಪೂರ್ಣಾಹುತಿಯೊಂದಿಗೆ ಗ್ರಹಶಾಂತಿ ವಿಧಿಯನ್ನು ಪೂರ್ಣಗೊಳಿಸಲಾಗುತ್ತದೆ.

ನಿಮಗೆ ಸಿಗುವ ಪ್ರಯೋಜನಗಳು

ನಿಮ್ಮ ಹೆಸರು, ಗೋತ್ರದೊಂದಿಗೆ ವಿಶೇಷ ಸಂಕಲ್ಪ

ಸಂಪೂರ್ಣ ಪೂಜೆಯ ವಿಡಿಯೋ —48 ಗಂಟೆಗಳಲ್ಲಿ WhatsAppಗೆ

ದೇವಸ್ಥಾನದ ವಿವರಗಳು

ಬಟುಕ ಭೈರವ ಸೋಮೇಶ್ವರ ದೇವಾಲಯ,

ಶ್ರೀಕಾಳಹಸ್ತಿ ಕ್ಷೇತ್ರ

ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)

Family Puja

ಮಾನ್ಯ ಪುರೋಹಿತ್ ರವರೇ, ವೇದ ಮಂದಿರ, ತಿರುಪತಿ ಇಲ್ಲಿ ನೆರವೇರಿದ ವಾರಾಹಿ ಮತ್ತು ಚಂಡಿ ಹೋಮ ಪೂಜೆಗಳನ್ನು ವಿಡಿಯೋ ಮುಖಾಂತರ ನಾವೆಲ್ಲರೂ ನೋಡಿ ಧ್ಯನ್ಯರಾಗಿದ್ದೇವೆ. ಈ ಪೂಜೆಯಿಂದ ಶ್ರೀ ವಾರಹಿದೇವಿ ಮತ್ತು ಶ್ರೀ ಚಂಡಿಕಾ ದೇವಿ ಪ್ರಸನ್ನರಾಗಿ ನಮ್ಮ ಕಷ್ಟಕಾರ್ಪಣ್ಯಗಳನ್ನು ನಿವಾರಿಸುತ್ತಾರೆಂದು ಭಾವಿಸುತ್ತೇವೆ. ನಿಮ್ಮ ಪೂಜೆ ಕಾರ್ಯಕ್ರಮಗಳನ್ನು ತುಂಬಾ ಚೆನ್ನಾಗಿ ನಡೆಸಿಕೊಟ್ಟಿರುತ್ತೀರಿ , ಧನ್ಯವಾದ

ಲ
ಲಕ್ಷ್ಮಿ
ಬೆಂಗಳೂರು
Verified
Couple Puja

ವೇದ ಮಂದಿರ ಹೋಮ ನನಗೆ ತುಂಬಾ ಇಷ್ಟ ಆಯ್ತು. ಸ್ಪಷ್ಟವಾದ ಸಂಸ್ಕೃತ ಉಚ್ಚಾರಣೆ, ಮನಸ್ಸಿಗೆ ನೆಮ್ಮದಿ ಕೊಡುವಂತಹ "ವಾರಾಹಿ ಅಮ್ಮನವರ ಪೂಜೆ" ನನ್ನ ಎಲ್ಲಾ ಕಷ್ಟಗಳನ್ನು ಅಮ್ಮನವರು ಪರಿಹಾರ ಮಾಡುವರೆಂದು ಸಂಕಲ್ಪ ಪೂಜೆಯನ್ನ ನೆರವೇರಿಸಿ ಕೊಟ್ಟಂತ ವೇದಮಂದಿರ ಪುರೋಹಿತರಿಗೆ ಅನಂತ ಕೋಟಿ ಧನ್ಯವಾದಗಳು

ಹ
ಹನುಮಂತರಾಯ
ಹುಬ್ಬಳ್ಳಿ
Verified
Private Puja

ನಮ್ಮ ಕುಟುಂಬದ ಒಳಿತಿಗಾಗಿ ಸಕಾಲದಲ್ಲಿ ಒಳ್ಳೆಯ ಮುಹೂರ್ತದಲ್ಲಿ ಪೂಜೆ ಹೋಮ ಮಾಡಿಕೊಟ್ಟ *ವೇದ ಮಂದಿರ* ಹಿರಿಯರಿಗೆ ಧನ್ಯವಾದಗಳು 🕉️🙏❤️

ವ
ವಿಶ್ವನಾಥ್
ಶಿವಮೊಗ್ಗ
Verified

Reviews

4.920K+
ಲ

ಲಕ್ಷ್ಮಿ

ಮಾನ್ಯ ಪುರೋಹಿತ್ ರವರೇ, ವೇದ ಮಂದಿರ, ತಿರುಪತಿ ಇಲ್ಲಿ ನೆರವೇರಿದ ವಾರಾಹಿ ಮತ್ತು ಚಂಡಿ ಹೋಮ ಪೂಜೆಗಳನ್ನು ವಿಡಿಯೋ ಮುಖಾಂತರ ನಾವೆಲ್ಲರೂ ನೋಡಿ ಧ್ಯನ್ಯರಾಗಿದ್ದೇವೆ. ಈ ಪೂಜೆಯಿಂದ ಶ್ರೀ ವಾರಹಿದೇವಿ ಮತ್ತು ಶ್ರೀ ಚಂಡಿಕಾ ದೇವಿ ಪ್ರಸನ್ನರಾಗಿ ನಮ್ಮ ಕಷ್ಟಕಾರ್ಪಣ್ಯಗಳನ್ನು ನಿವಾರಿಸುತ್ತಾರೆಂದು ಭಾವಿಸುತ್ತೇವೆ. ನಿಮ್ಮ ಪೂಜೆ ಕಾರ್ಯಕ್ರಮಗಳನ್ನು ತುಂಬಾ ಚೆನ್ನಾಗಿ ನಡೆಸಿಕೊಟ್ಟಿರುತ್ತೀರಿ , ಧನ್ಯವಾದ

5.0
ಹ

ಹನುಮಂತರಾಯ

ವೇದ ಮಂದಿರ ಹೋಮ ನನಗೆ ತುಂಬಾ ಇಷ್ಟ ಆಯ್ತು. ಸ್ಪಷ್ಟವಾದ ಸಂಸ್ಕೃತ ಉಚ್ಚಾರಣೆ, ಮನಸ್ಸಿಗೆ ನೆಮ್ಮದಿ ಕೊಡುವಂತಹ "ವಾರಾಹಿ ಅಮ್ಮನವರ ಪೂಜೆ" ನನ್ನ ಎಲ್ಲಾ ಕಷ್ಟಗಳನ್ನು ಅಮ್ಮನವರು ಪರಿಹಾರ ಮಾಡುವರೆಂದು ಸಂಕಲ್ಪ ಪೂಜೆಯನ್ನ ನೆರವೇರಿಸಿ ಕೊಟ್ಟಂತ ವೇದಮಂದಿರ ಪುರೋಹಿತರಿಗೆ ಅನಂತ ಕೋಟಿ ಧನ್ಯವಾದಗಳು

5.0
ವ

ವಿಶ್ವನಾಥ್

ನಮ್ಮ ಕುಟುಂಬದ ಒಳಿತಿಗಾಗಿ ಸಕಾಲದಲ್ಲಿ ಒಳ್ಳೆಯ ಮುಹೂರ್ತದಲ್ಲಿ ಪೂಜೆ ಹೋಮ ಮಾಡಿಕೊಟ್ಟ *ವೇದ ಮಂದಿರ* ಹಿರಿಯರಿಗೆ ಧನ್ಯವಾದಗಳು 🕉️🙏❤️

5.0
ವೇದಮಂದಿರ್‌ನೊಂದಿಗೆ ಪ್ರಸಿದ್ಧ ದೇವಾಲಯಗಳ ಪೂಜೆಗಳ ಮೂಲಕ ಆರೋಗ್ಯ, ಐಶ್ವರ್ಯ ಮತ್ತು ಶಾಂತಿಯನ್ನು ಪಡೆದುಕೊಳ್ಳಿ
ರಾಹುಕಾಲ ವಿಶೇಷ ರಾಹುಕೇತು ಶಾಂತಿ ಹೋಮ
ISO Certified 27001100% Secure PaymentCustomer Support
ಪೂಜೆ ಮುಗಿದ 48 ಗಂಟೆಗಳ ಒಳಗೆ ಪೂಜೆಯ ವಿಡಿಯೋವನ್ನು ನಿಮ್ಮ WhatsAppಗೆ ಕಳುಹಿಸಲಾಗುತ್ತದೆ.

You won't be charged yet

ISO Certified 27001100% Secure PaymentCustomer Support