ಜೀವನದಲ್ಲಿ ಯಾವ ಸಮಯದಲ್ಲಿ, ಯಾವ ರೂಪದಲ್ಲಿ ಸಂಕಷ್ಟಗಳು ಬರುತ್ತವೆ ಎಂದು ಹೇಳಲಾಗದು. ಶತ್ರುಬಾಧೆ, ನರದೃಷ್ಟಿ, ಆರ್ಥಿಕ ತೊಂದರೆ, ಅನಾರೋಗ್ಯ ಮತ್ತು ಭವಿಷ್ಯದ ಆತಂಕಗಳಿಂದ ರಕ್ಷಣೆ ಪಡೆಯಲು ಅಷ್ಟಭೈರವರನ್ನು ಆವಾಹಿಸಿ ‘ಶ್ರೀ ಅಷ್ಟಭೈರವ ಆಪದುದ್ಧಾರಣ ರಕ್ಷಾ ಹೋಮ’ ನಡೆಸಲಾಗುತ್ತದೆ. ಜೊತೆಗೆ ದೃಷ್ಟಿದೋಷ ಹಾಗೂ ಪ್ರತಿಕೂಲತೆ ನಿವಾರಣೆಗೆ ಕಾಲಭೈರವನಿಗೆ ಕೂಷ್ಮಾಂಡ ದೀಪ ಸೇವೆ ಸಲ್ಲಿಸಲಾಗುತ್ತದೆ. ಡಿಸೆಂಬರ್ 1 ರ ‘ಕಾಲಭೈರವ ಜಯಂತಿ’ ಅಂಗವಾಗಿ ವೇದಮಂದಿರ್ ಆಯೋಜಿಸಿರುವ ಈ ವಿಶೇಷ ಸೇವೆಯಲ್ಲಿ ನೀವು ಪಾಲ್ಗೊಂಡು ಸಂಕಲ್ಪ ಮಾಡಿಕೊಳ್ಳಬಹುದು.
ಅಜ್ಞಾತ ಭಯಗಳನ್ನು ನಿವಾರಿಸುವ ‘ಕಾಲಭೈರವ’ - ಸಮಯಕ್ಕೂ ಮತ್ತು ಮೃತ್ಯುವಿಗೂ ಅಧಿಪತಿಯಾಗಿ ಆರಾಧಿಸಲ್ಪಡುವ ದೇವರು ಕಾಲಭೈರವ. ಶಿವನ ಉಗ್ರರೂಪವಾಗಿ ಅವತರಿಸಿದ ಆತನನ್ನು ಕಾಲವನ್ನು ನಿಯಂತ್ರಿಸುವ ಮಹಾಶಕ್ತಿಯಾಗಿ, ಕಾಶಿ ಕ್ಷೇತ್ರಪಾಲಕನಾಗಿ ಪೂಜಿಸಲಾಗುತ್ತದೆ. ಪುರಾಣ ಕಥೆಯ ಪ್ರಕಾರ.. ಬ್ರಹ್ಮದೇವನ ಅಹಂಕಾರವನ್ನು ಅಡಗಿಸಲು ಅವತರಿಸಿದ ಕಾಲಭೈರವನು ಆತನ ಐದನೇ ತಲೆಯನ್ನು ಉಗುರಿನಿಂದ ಛೇದಿಸಿ, ಬ್ರಹ್ಮಹತ್ಯಾ ದೋಷದ ನಿವಾರಣೆಗಾಗಿ ಕಾಶಿಯನ್ನು ತಲುಪಿದನು. ಶಿವನ ಆಜ್ಞೆಯ ಮೇರೆಗೆ ಅಲ್ಲಿ ಕ್ಷೇತ್ರಪಾಲಕನಾಗಿ ಅಭಯ ನೀಡುತ್ತಿದ್ದಾನೆ ಎಂಬ ನಂಬಿಕೆಯಿದೆ. ಮನುಷ್ಯನನ್ನು ಕಾಡುವ ಕಾಲಭಯ, ಮೃತ್ಯುಭಯ ಮತ್ತು ಭವಿಷ್ಯದ ಬಗೆಗಿನ ಆತಂಕಗಳಿಗೂ ಅಧಿಪತಿಯೆಂದು ಭಾವಿಸಲಾದ ಕಾಲಭೈರವನನ್ನು ಆರಾಧಿಸುವುದರಿಂದ ಅವುಗಳನ್ನು ಎದುರಿಸುವ ಧೈರ್ಯ, ಆಪತ್ತುಗಳನ್ನು ಮೆಟ್ಟಿ ನಿಲ್ಲುವ ಆತ್ಮಸ್ಥೈರ್ಯ ದೊರೆಯುತ್ತದೆ ಹಾಗೂ ಜಾತಕ ದೋಷಗಳೂ ನಿವಾರಣೆಯಾಗುತ್ತವೆ ಎಂಬ ನಂಬಿಕೆಯಿದೆ. ಆದ್ದರಿಂದಲೇ ‘ಕಾಲಭೈರವ ಜಯಂತಿ’ಯ ದಿನದಂದು ಆತನನ್ನು ಆರಾಧಿಸುವುದು ವಿಶೇಷವಾದ ಅವಕಾಶವಾಗಿದೆ.
ದೃಷ್ಟಿ ದೋಷ ಪರಿಹಾರಕ್ಕಾಗಿ ‘ಕೂಷ್ಮಾಂಡ ದೀಪ’ - ಇತರರ ಅಸೂಯೆ ಮತ್ತು ನರದೃಷ್ಟಿಯಿಂದ ಉಂಟಾಗುವ ಅಡೆತಡೆಗಳು ನಿವಾರಣೆಯಾಗಿ ಸಕಲ ಶುಭಗಳು ಉಂಟಾಗಲೆಂದು ಮಾಡುವ ವಿಶೇಷ ಆರಾಧನೆಯೇ ‘ಕೂಷ್ಮಾಂಡ ದೀಪಪೂಜೆ’. ಸಾಮಾನ್ಯ ದೀಪಾರಾಧನೆಗಿಂತ ಭಿನ್ನವಾಗಿ ಕುಂಬಳಕಾಯಿಯನ್ನೇ ದೀಪದ ಪಾತ್ರೆಯಾಗಿ ಬಳಸಿ ಕಾಲಭೈರವನನ್ನು ಆರಾಧಿಸುವುದು ಇದರ ವಿಶೇಷತೆ. ಪ್ರಾಚೀನ ಆಚಾರಗಳಲ್ಲಿ ಉಗ್ರದೇವತೆಗಳ ಆರಾಧನೆಯಲ್ಲಿ ಬಲಿಗೆ ಪರ್ಯಾಯವಾಗಿ ಕೂಷ್ಮಾಂಡವನ್ನು ಸಾತ್ವಿಕ ಸಮರ್ಪಣೆಯಾಗಿ ಬಳಸುವ ಪದ್ಧತಿಯಿದೆ. ಆದ್ದರಿಂದಲೇ ಇದನ್ನು ಪ್ರತಿಕೂಲತೆಗಳ ನಿವಾರಣೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸುವ ಅಗ್ನಿಸ್ವರೂಪಿಯಾಗಿ ಆರಾಧಿಸಲಾಗುವ ಕಾಲಭೈರವನ ಸನ್ನಿಧಿಯಲ್ಲಿ ಈ ದೀಪವನ್ನು ಬೆಳಗಿಸುವುದರಿಂದ ನರದೃಷ್ಟಿ, ಅಸೂಯೆ ಮತ್ತು ಪ್ರತಿಕೂಲ ಪರಿಣಾಮಗಳು ದೂರವಾಗಿ ಮನಶ್ಯಾಂತಿ ಹಾಗೂ ಕುಟುಂಬದ ಶುಭ ಉಂಟಾಗಲೆಂದು ಪ್ರಾರ್ಥಿಸಲಾಗುತ್ತದೆ. ಮನೆಯಲ್ಲಿ ಮತ್ತು ವ್ಯಾಪಾರದ ಸ್ಥಳಗಳಲ್ಲಿ ಸಕಾರಾತ್ಮಕ ವಾತಾವರಣ ನೆಲೆಸಬೇಕೆಂದು, ಅನಾರೋಗ್ಯಗಳು, ಆರ್ಥಿಕ ಅಡೆತಡೆಗಳು ಮತ್ತು ಅನಿರೀಕ್ಷಿತ ತೊಂದರೆಗಳಿಂದ ಉಪಶಮನ ದೊರೆಯಬೇಕೆಂದು ಬಯಸುವವರಿಗೆ ಈ ಪೂಜೆ ವಿಶೇಷವಾದದ್ದಾಗಿದೆ.
ಅಷ್ಟದಿಕ್ಕುಗಳ ಅಧಿಪತಿ.. ಅಷ್ಟಭೈರವ - ಪರಮಶಿವನ ಉಗ್ರರೂಪವಾದ ಕಾಲಭೈರವನ 8 ಪ್ರಮುಖ ಸ್ವರೂಪಗಳನ್ನೇ ಅಷ್ಟಭೈರವರು ಎನ್ನುತ್ತಾರೆ. ಇವರನ್ನು 8 ದಿಕ್ಕುಗಳಿಗೆ ರಕ್ಷಕರಾಗಿ ಪೂಜಿಸಲಾಗುತ್ತದೆ. ಅಷ್ಟದಿಕ್ಕುಗಳಲ್ಲಿನ ಪ್ರತಿಕೂಲ ಶಕ್ತಿಗಳನ್ನು ಅಡಗಿಸಿ, ಧರ್ಮವನ್ನು ಕಾಪಾಡುವ ದೈವಿಕ ಶಕ್ತಿಗಳಾಗಿ ಇವರನ್ನು ಆರಾಧಿಸಲಾಗುತ್ತದೆ. ಕೆಲವು ಪುರಾಣ ಮತ್ತು ಉಪಾಸನಾ ಕಥೆಗಳಲ್ಲಿ ಅಂಧಕಾಸುರ, ರಕ್ತಬೀಜ ಮುಂತಾದ ರಾಕ್ಷಸರ ಸಂಹಾರದೊಂದಿಗೆ ಭೈರವ ಸ್ವರೂಪಗಳನ್ನು ಬೆಸೆಯುವ ಕಥೆಗಳು ಕಂಡುಬರುತ್ತವೆ.
ಭೈರವನ ಹೆಸರು - ತತ್ತ್ವ
ಅಸಿತಾಂಗ ಭೈರವ(ಪೂರ್ವ) - ಸೃಜನಶೀಲತೆ, ಜ್ಞಾನ, ಸ್ಪಷ್ಟತೆ
ರುರು ಭೈರವ(ಆಗ್ನೇಯ) - ವಿದ್ಯೆ, ಕಲೆಗಳು, ಸಂಪತ್ತು
ಚಂಡ ಭೈರವ(ದಕ್ಷಿಣ) - ಶಕ್ತಿ, ಧೈರ್ಯ, ಶತ್ರು ಜಯ
ಕ್ರೋಧ ಭೈರವ(ನೈರುತ್ಯ) - ಕೆಡುಕಿನ ಮೇಲೆ ವಿಜಯ, ದೃಢ ನಿರ್ಧಾರಗಳು
ಉನ್ಮತ್ತ ಭೈರವ(ಪಶ್ಚಿಮ) - ಅಹಂಕಾರ ನಾಶ, ಆನಂದ
ಕಪಾಲ ಭೈರವ(ವಾಯುವ್ಯ) - ಕರ್ಮ ಫಲ, ಸತ್ಕಾರ್ಯಗಳ ರಕ್ಷಣೆ
ಭೀಷಣ ಭೈರವ(ಉತ್ತರ) - ಭಯ ನಿವಾರಣೆ, ದುಷ್ಟ ಶಕ್ತಿಗಳ ನಾಶ
ಸಂಹಾರ ಭೈರವ(ಈಶಾನ್ಯ) - ಪಾಪ ಕ್ಷಾಲನೆ, ಮೋಕ್ಷ ಮಾರ್ಗ
ಆಪತ್ತುಗಳಿಂದ ಉದ್ಧರಿಸುವ ‘ಅಷ್ಟಭೈರವ ಆಪದುದ್ಧಾರಣ ರಕ್ಷಾ ಹೋಮ’ - ಜೀವನದಲ್ಲಿ ಎದುರಾಗುವ ಶತ್ರುಬಾಧೆಗಳು, ಸಂಚುಗಳು, ಕೋರ್ಟ್ ಪ್ರಕರಣಗಳು, ಆಸ್ತಿ ವಿವಾದಗಳು, ವ್ಯಾಪಾರ ನಷ್ಟಗಳು, ಆಕಸ್ಮಿಕ ಆರ್ಥಿಕ ತೊಂದರೆಗಳು, ರಾಹು, ಕೇತು, ಶನಿ ಗ್ರಹ ಸಂಬಂಧಿತ ಸಮಸ್ಯೆಗಳು, ಅಪಘಾತಗಳು ಮತ್ತು ಅಕಾಲ ಮೃತ್ಯುಭಯಗಳು ಮನುಷ್ಯನನ್ನು ಕಂಗೆಡಿಸುತ್ತಿರುತ್ತವೆ. ಇಂತಹ ಆಪತ್ತುಗಳಿಂದ ರಕ್ಷಣೆ ಕೋರುತ್ತಾ ಅಷ್ಟಭೈರವರನ್ನು ಏಕಕಾಲದಲ್ಲಿ ಪ್ರಾರ್ಥಿಸುವ ವಿಶೇಷ ಆರಾಧನೆಯೇ ‘ಶ್ರೀ ಅಷ್ಟಭೈರವ ಆಪದುದ್ಧಾರಣ ರಕ್ಷಾ ಹೋಮ’. ಈ ಹೋಮದಲ್ಲಿ ಅಷ್ಟಭೈರವರನ್ನು ವಿಭಿನ್ನ ಸ್ವರೂಪಗಳಾಗಿ ಹೋಮಕುಂಡದಲ್ಲಿ ಆವಾಹನೆ ಮಾಡಲಾಗುತ್ತದೆ. ಪ್ರತಿಯೊಂದು ಭೈರವ ಸ್ವರೂಪಕ್ಕೆ ನಿಗದಿಪಡಿಸಿದ ಬೀಜಮಂತ್ರಗಳು ಮತ್ತು ಮೂಲಮಂತ್ರಗಳನ್ನು ಶಾಸ್ತ್ರೋಕ್ತವಾಗಿ ಜಪಿಸುತ್ತಾ ಎಳ್ಳು, ಸಾಸಿವೆ, ತುಪ್ಪ, ಸಮಿತ್ತು ಮುಂತಾದ ಹೋಮದ್ರವ್ಯಗಳನ್ನು ಅಗ್ನಿಗೆ ಸಮರ್ಪಿಸಲಾಗುತ್ತದೆ. ಪ್ರತಿ ಮಂತ್ರೋಚ್ಚಾರಣೆಗೆ ಅನುಗುಣವಾಗಿ ಸಲ್ಲಿಸುವ ಆಹುತಿಗಳೊಂದಿಗೆ ಅಷ್ಟಭೈರವರ ಅನುಗ್ರಹವನ್ನು ಪ್ರಾರ್ಥಿಸಲಾಗುತ್ತದೆ. 8 ಭೈರವ ಶಕ್ತಿಗಳನ್ನೂ ಒಂದೇ ಹೋಮದಲ್ಲಿ ಆರಾಧಿಸುವುದರಿಂದ ಸಮಸ್ತ ಆಪತ್ತುಗಳಿಂದ ರಕ್ಷಣೆ, ಶತ್ರುಗಳ ಮೇಲೆ ವಿಜಯ ಮತ್ತು ಜೀವನದ ಅಡೆತಡೆಗಳಿಂದ ಮುಕ್ತಿ ದೊರೆಯಲೆಂದು ಸಂಕಲ್ಪಿಸಲಾಗುತ್ತದೆ.
ಕಾಲಭೈರವ ಜಯಂತಿ, ಮಂಗಳವಾರ.. ಅಪರೂಪದ ಆರಾಧನಾ ಅವಕಾಶ!
ಕಾಲಭೈರವ ಜಯಂತಿ ಮತ್ತು ಕುಜನಿಗೆ ಅಧಿಪತ್ಯವಿರುವ ಮಂಗಳವಾರ.. ಈ ಎರಡು ವಿಶೇಷಗಳು ಒಟ್ಟಿಗೆ ಬಂದಿರುವ ಡಿಸೆಂಬರ್ 1ನೇ ತಾರೀಖು ಭೈರವಾರಾಧನೆಗೆ ಅತ್ಯಂತ ವಿಶಿಷ್ಟವಾದ ದಿನವಾಗಿದೆ. ಈ ಪರ್ವದಿನದಂದು ಕಾಲಭೈರವನಿಗೆ ಎರಡು ವಿಶೇಷ ಆರಾಧನೆಗಳನ್ನು ನೆರವೇರಿಸುತ್ತಿರುವುದು ಮತ್ತೊಂದು ವೈಶಿಷ್ಟ್ಯ. ಒಂದೆಡೆ ಕೂಷ್ಮಾಂಡ ದೀಪಪೂಜೆಯ ಮೂಲಕ ನರದೃಷ್ಟಿ, ಅಸೂಯೆ ಮತ್ತು ಪ್ರತಿಕೂಲತೆಗಳಿಂದ ಉಪಶಮನ ಕೋರುತ್ತಾ.. ಮತ್ತೊಂದೆಡೆ ಅಷ್ಟದಿಕ್ಕುಗಳ ರಕ್ಷಕರಾದ 8 ಭೈರವ ಸ್ವರೂಪಗಳನ್ನು ಆವಾಹನೆ ಮಾಡುವ ‘ಅಷ್ಟಭೈರವ ಆಪದುದ್ಧಾರಣ ರಕ್ಷಾ ಹೋಮ’ದೊಂದಿಗೆ ಸಕಲ ಆಪತ್ತುಗಳಿಂದ ರಕ್ಷಣೆಗಾಗಿ ಪ್ರಾರ್ಥಿಸಬಹುದು. ಮಂಗಳವಾರದಂದು ಭೈರವನನ್ನು ಆರಾಧಿಸುವುದರಿಂದ ಧೈರ್ಯ, ಶತ್ರುಜಯ, ಕುಜದೋಷ ನಿವಾರಣೆ ಮತ್ತು ವಿವಾಹದ ಅಡೆತಡೆಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆಯಿದೆ. ವೇದಮಂದಿರ್ ಆಯೋಜಿಸುತ್ತಿರುವ ಈ ವಿಶೇಷ ಆರಾಧನೆಯಲ್ಲಿ ನಿಮ್ಮ ಗೋತ್ರನಾಮಗಳೊಂದಿಗೆ ಸಂಕಲ್ಪ ಮಾಡಿಸಿಕೊಂಡು ಕುಟುಂಬದ ಕ್ಷೇಮ, ಆಯುರಾರೋಗ್ಯ ಮತ್ತು ಸಕಲ ಆಪತ್ತುಗಳಿಂದ ರಕ್ಷಣೆಗಾಗಿ ಸ್ವಾಮಿಯ ಅನುಗ್ರಹವನ್ನು ಪಡೆದುಕೊಳ್ಳಿ.
ವೇದಮಂದಿರದ ವತಿಯಿಂದ ಡಿಸೆಂಬರ್ 1 ರಂದು "ಕಾಲಭೈರವ ಜಯಂತಿ" ಪ್ರಯುಕ್ತ "ಕೂಷ್ಮಾಂಡ ದೀಪಪೂಜೆ ಮತ್ತು ಶ್ರೀ ಅಷ್ಟಭೈರವ ಆಪದುದ್ಧಾರಣ ರಕ್ಷಾ ಹೋಮ" ವನ್ನುಆಯೋಜಿಸಲಾಗಿದೆ. ಇಂದೇ ನಿಮ್ಮ ಹೆಸರು ಮತ್ತು ಗೋತ್ರವನ್ನು ನೊಂದಾಯಿಸಿಕೊಳ್ಳಿ . ಪೂಜೆ ನೆರವೇರಿದ ಬಳಿಕ, ಪೂಜೆಯ ಸಂಪೂರ್ಣ ವಿಡಿಯೋ —48 ಗಂಟೆಗಳಲ್ಲಿ ನಿಮ್ಮ WhatsAppಗೆ ಕಳುಹಿಸಲಾಗುತ್ತದೆ