
ಕಾರ್ತಿಕ ಮಹಾ ಶಿವೋತ್ಸವ; 9 ದಿನಗಳು, 9 ವಿಶೇಷ ಶಿವ ಪೂಜೆಗಳು
ಈಶ್ವರ ದೇವಸ್ಥಾನ ಬೆಂಗಳೂರು
ಕಾರ್ತಿಕ ಮಾಸ ವಿಶೇಷ
10K+pujas conducted
You won't be charged yet
ಅಕಾಲ ಮೃತ್ಯುಭಯಗಳು ಹಾಗೂ ಪ್ರಾಣಾಪಾಯದ ಪರಿಸ್ಥಿತಿಗಳಿಂದ ರಕ್ಷಣೆ ದೊರೆತು, ಸಂಪೂರ್ಣ ಆಯುರಾರೋಗ್ಯಗಳೊಂದಿಗೆ ನೂರು ಕಾಲ ಸುಖವಾಗಿ ಬಾಳಲೆಂದು ಮಹಾದೇವನಲ್ಲಿ ಪ್ರಾರ್ಥಿಸಬಹುದು.
ದೀರ್ಘಕಾಲಿಕ ಅನಾರೋಗ್ಯದ ಬಾಧೆಗಳು ಮತ್ತು ಶಾರೀರಿಕ ತೊಂದರೆಗಳು ದೂರವಾಗಿ, ದೇಹಕ್ಕೆ ಶಕ್ತಿ, ಮನಸ್ಸಿಗೆ ಪ್ರಶಾಂತತೆ ಮತ್ತು ಜೀವನಕ್ಕೆ ಹೊಸ ಹುರುಪು ಉಂಟಾಗಲೆಂದು ಸಂಕಲ್ಪಿಸಬಹುದು.
ಆರ್ಥಿಕ ತೊಂದರೆಗಳು, ಅನಗತ್ಯ ಖರ್ಚುಗಳು ಮತ್ತು ಧನನಷ್ಟಗಳು ನಿವಾರಣೆಯಾಗಿ, ದುಡಿದ ಸಂಪತ್ತು ಉಳಿಯಲೆಂದೂ, ಆದಾಯ ಸಮೃದ್ಧಿ, ಐಶ್ವರ್ಯ ಲಭಿಸಲೆಂದೂ ಪ್ರಾರ್ಥಿಸಬಹುದು.
ಕುಟುಂಬದಲ್ಲಿನ ಕಲಹಗಳು ಮತ್ತು ಮನಸ್ತಾಪಗಳು ದೂರವಾಗಿ, ದಂಪತಿಗಳ ನಡುವೆ ಅನ್ಯೋನ್ಯತೆ ಹಾಗೂ ಕುಟುಂಬದ ಸದಸ್ಯರಲ್ಲಿ ಪ್ರೇಮಾನುರಾಘಗಳು ಬೆಳೆದು ಸುಖ-ಶಾಂತಿ ನೆಲೆಸಲೆಂದು ಬೇಡಿಕೊಳ್ಳಬಹುದು.
ಎಷ್ಟೇ ಪ್ರಯತ್ನಿಸಿದರೂ ಪೂರ್ಣಗೊಳ್ಳದ ಕೆಲಸಗಳು ಸಫಲವಾಗಿ, ಬಹಳ ಕಾಲದಿಂದ ಎದುರಾಗುತ್ತಿರುವ ಅಡೆತಡೆಗಳು ನಿವಾರಣೆಯಾಗಿ, ವೃತ್ತಿ, ವ್ಯವಹಾರ ಮತ್ತು ವೈಯಕ್ತಿಕ ಬದುಕಿನಲ್ಲಿ ಪ್ರಗತಿ ಸಾಧಿಸಲೆಂದು ಸಂಕಲ್ಪಿಸಬಹುದು.
ವಿಘ್ನಗಳು ನಿವಾರಣೆಯಾಗಿ ಪೂಜೆಯು ನಿರ್ವಿಘ್ನವಾಗಿ ಹಾಗೂ ಶುಭಪ್ರದವಾಗಿ ನೆರವೇರಲೆಂದು ಗಣಪತಿಯನ್ನು ಪ್ರಾರ್ಥಿಸಲಾಗುತ್ತದೆ.
ಭಕ್ತರ ನಾಮಗೋತ್ರಗಳೊಂದಿಗೆ ಆಯುರಾರೋಗ್ಯಗಳು ಮತ್ತು ಕುಟುಂಬದ ಶ್ರೇಯಸ್ಸಿಗಾಗಿ ಸಂಕಲ್ಪ ಮಾಡಲಾಗುತ್ತದೆ.
ಮಣ್ಣಿನಿಂದ ರೂಪಿಸಿದ ಪಾರ್ಥಿವ ಶಿವಲಿಂಗಗಳನ್ನು ಶಿವಸ್ವರೂಪಗಳೆಂದು ಭಾವಿಸಿ, ಶಾಸ್ತ್ರೋಕ್ತ ವಿಧಿವಿಧಾನಗಳೊಂದಿಗೆ ಪೂಜಿಸಲಾಗುತ್ತದೆ.
ನಮಕ ಮತ್ತು ಚಮಕ ಮಂತ್ರೋಚ್ಚಾರಣೆಗಳ ನಡುವೆ 1,116 ಶಿವಲಿಂಗಗಳಿಗೆ ಅಭಿಷೇಕವನ್ನು ನೆರವೇರಿಸಲಾಗುತ್ತದೆ.
ಅಘೋರ ರುದ್ರ ಮಂತ್ರಗಳನ್ನು ಪಠಿಸುತ್ತಾ, ವೈದಿಕ ವಿಧಾನದಲ್ಲಿ ಪವಿತ್ರ ಹೋಮಾಗ್ನಿಗೆ ಆಹುತಿಗಳನ್ನು ಅರ್ಪಿಸಿ ಪರಮಶಿವನನ್ನು ಆರಾಧಿಸಲಾಗುತ್ತದೆ.
ಮಾನ್ಯ ಪುರೋಹಿತ್ ರವರೇ, ವೇದ ಮಂದಿರ, ತಿರುಪತಿ ಇಲ್ಲಿ ನೆರವೇರಿದ ವಾರಾಹಿ ಮತ್ತು ಚಂಡಿ ಹೋಮ ಪೂಜೆಗಳನ್ನು ವಿಡಿಯೋ ಮುಖಾಂತರ ನಾವೆಲ್ಲರೂ ನೋಡಿ ಧ್ಯನ್ಯರಾಗಿದ್ದೇವೆ. ಈ ಪೂಜೆಯಿಂದ ಶ್ರೀ ವಾರಹಿದೇವಿ ಮತ್ತು ಶ್ರೀ ಚಂಡಿಕಾ ದೇವಿ ಪ್ರಸನ್ನರಾಗಿ ನಮ್ಮ ಕಷ್ಟಕಾರ್ಪಣ್ಯಗಳನ್ನು ನಿವಾರಿಸುತ್ತಾರೆಂದು ಭಾವಿಸುತ್ತೇವೆ. ನಿಮ್ಮ ಪೂಜೆ ಕಾರ್ಯಕ್ರಮಗಳನ್ನು ತುಂಬಾ ಚೆನ್ನಾಗಿ ನಡೆಸಿಕೊಟ್ಟಿರುತ್ತೀರಿ , ಧನ್ಯವಾದ
ವೇದ ಮಂದಿರ ಹೋಮ ನನಗೆ ತುಂಬಾ ಇಷ್ಟ ಆಯ್ತು. ಸ್ಪಷ್ಟವಾದ ಸಂಸ್ಕೃತ ಉಚ್ಚಾರಣೆ, ಮನಸ್ಸಿಗೆ ನೆಮ್ಮದಿ ಕೊಡುವಂತಹ "ವಾರಾಹಿ ಅಮ್ಮನವರ ಪೂಜೆ" ನನ್ನ ಎಲ್ಲಾ ಕಷ್ಟಗಳನ್ನು ಅಮ್ಮನವರು ಪರಿಹಾರ ಮಾಡುವರೆಂದು ಸಂಕಲ್ಪ ಪೂಜೆಯನ್ನ ನೆರವೇರಿಸಿ ಕೊಟ್ಟಂತ ವೇದಮಂದಿರ ಪುರೋಹಿತರಿಗೆ ಅನಂತ ಕೋಟಿ ಧನ್ಯವಾದಗಳು
ನಮ್ಮ ಕುಟುಂಬದ ಒಳಿತಿಗಾಗಿ ಸಕಾಲದಲ್ಲಿ ಒಳ್ಳೆಯ ಮುಹೂರ್ತದಲ್ಲಿ ಪೂಜೆ ಹೋಮ ಮಾಡಿಕೊಟ್ಟ *ವೇದ ಮಂದಿರ* ಹಿರಿಯರಿಗೆ ಧನ್ಯವಾದಗಳು 🕉️🙏❤️