ಚಂಪಾ ಷಷ್ಠಿ ವಿಶೇಷ

ಸುಬ್ರಹ್ಮಣ್ಯ ಮಹಾ ಅಭಿಷೇಕ ಮತ್ತು ಸರ್ಪದೋಷ ನಿವಾರಣಾ ನಾಗ ಪೂಜೆ

  • ಕಾಲಸರ್ಪ ದೋಷ
  • ವಿವಾಹ ವಿಳಂಬ
  • ಸಂತಾನ ಭಾಗ್ಯ
ವೈದಿಕ ಯಾಗಶಾಲಾ, ಬೆಂಗಳೂರು.
ಮಂಗಳವಾರ, 15 ಡಿಸೆಂಬರ್ | ಶುಭ ಮುಹೂರ್ತ
00days:00hrs:00mins:00secs
Muhurat ends in

10K+pujas conducted

Puja Video Delivered Within 48 Hours

Verified & Experienced Purohits

Pujas Performed in Sacred Temples

100% Authentic Vedic Rituals

Participate Now

You won't be charged yet

Puja Video Delivered Within 48 Hours

Verified & Experienced Purohits

Pujas Performed in Sacred Temples

100% Authentic Vedic Rituals

ಪೂಜೆಯ ಬಗ್ಗೆ

ಭೂಲೋಕದ ಪ್ರತ್ಯಕ್ಷ ದೈವ, ಕಲಿಯುಗದ ವರದಾಯಕ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಆರಾಧನೆಗೆ ವರ್ಷದ ಅತ್ಯಂತ ಶ್ರೇಷ್ಠ ಮತ್ತು ಶಕ್ತಿಶಾಲಿ ದಿನವೇ 'ಚಂಪಾ ಷಷ್ಠಿ'. ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಈ ಪವಿತ್ರ ಷಷ್ಠಿಯಂದು, ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮತ್ತು ನಾಗದೇವತೆಯನ್ನು ಆರಾಧಿಸುವುದರಿಂದ ಜನ್ಮಜನ್ಮಾಂತರದ ಕರ್ಮ ದೋಷಗಳು ನಿವಾರಣೆಯಾಗಿ ಭಾಗ್ಯೋದಯವಾಗುತ್ತದೆ ಎಂಬುದು ಭಕ್ತರ ಅಚಲ ನಂಬಿಕೆ.

ನಾಗದೇವತೆಯ ಆಶೀರ್ವಾದವಿಲ್ಲದೆ ಜೀವನದಲ್ಲಿ ಯಾವುದೇ ಕಾರ್ಯವು ಸುಲಭವಾಗಿ ಸಾಗುವುದಿಲ್ಲ. ನಿಮ್ಮ ಜಾತಕದಲ್ಲಿರುವ ಸರ್ಪ ದೋಷ, ಕಾಳಸರ್ಪ ದೋಷ, ರಾಹು-ಕೇತು ದೋಷಗಳಿಂದ ಉಂಟಾಗುವ ಮಾನಸಿಕ ಆತಂಕ, ಅನಿರೀಕ್ಷಿತ ವಿಘ್ನಗಳು, ವಿವಾಹ ವಿಳಂಬ, ಸಂತಾನ ತೊಂದರೆ, ಆರ್ಥಿಕ ಏರಿಳಿತ ಹಾಗೂ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಚಂಪಾ ಷಷ್ಠಿಯಂದು ಸಲ್ಲಿಸುವ ಪೂಜೆ ಅತ್ಯಂತ ಫಲಪ್ರದವಾಗಿದೆ.

ಬದುಕಿನ ಸಕಲ ದೋಷಗಳಿಗೆ ಪರಿಹಾರ ನೀಡುವ ಪವಿತ್ರ ಪರ್ವ - ಚಂಪಾ ಷಷ್ಠಿ ಶ್ರೀ ಸುಬ್ರಹ್ಮಣ್ಯ ಮಹಾ ಅಭಿಷೇಕ ಹಾಗೂ ಸರ್ಪದೋಷ ನಿವಾರಣಾ ನಾಗ ಪೂಜೆ!

ಪುರಾಣಗಳ ಪ್ರಕಾರ - ಸನಾತನ ಧರ್ಮದ ಪುರಾಣಗಳ ಪ್ರಕಾರ, ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಪವಿತ್ರ ಷಷ್ಠಿ ತಿಥಿಯಂದು ಶಿವ-ಪಾರ್ವತಿಯರ ತೇಜಸ್ಸಿನಿಂದ ಅವತರಿಸಿದ ಭಗವಾನ್ ಶ್ರೀ ಸುಬ್ರಹ್ಮಣ್ಯ ಸ್ವಾಮಿಯು ಲೋಕಕಂಟಕನಾಗಿದ್ದ ತಾರಕಾಸುರನನ್ನು ಸಂಹರಿಸಿ, ಧರ್ಮ ಮತ್ತು ಲೋಕಶಾಂತಿಯನ್ನು ಪುನಃ ಸ್ಥಾಪಿಸಿದನು. ದುಷ್ಟ ಶಕ್ತಿಗಳ ನಿಗ್ರಹವಾಗಿ ಶಕ್ತಿ, ವಿಜಯ ಮತ್ತು ನವಚೈತನ್ಯದ ಸಂಕೇತವಾಗಿ ಈ ಷಷ್ಠಿಯನ್ನು ಆಚರಿಸಲಾಗುತ್ತದೆ. ಸನಾತನ ಪರಂಪರೆಯಲ್ಲಿ ಸುಬ್ರಹ್ಮಣ್ಯ ಸ್ವಾಮಿಯು ನಾಗಲೋಕದ ಅಧಿಪತಿಯಾದ ವಾಸುಕಿ ಹಾಗೂ ನಾಗದೇವತೆಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದು, ನಾಗರೂಪದಲ್ಲೂ ಮತ್ತು ನಾಗದೇವತೆಯು ಸುಬ್ರಹ್ಮಣ್ಯನ ಅಂಶವಾಗಿಯೂ ಪೂಜಿಸಲ್ಪಡುತ್ತಾರೆ.  

ಉಗ್ರ ತೇಜಸ್ಸು ಮತ್ತು ದೈವಶಕ್ತಿಯಿಂದ ಕೂಡಿದ ಸ್ಕಂದನಿಗೆ ಹಾಲು, ಮೊಸರು, ತುಪ್ಪ, ಜೇನು, ಸಕ್ಕರೆ ಮುಂತಾದ ಪವಿತ್ರ ದ್ರವ್ಯಗಳಿಂದ ನೆರವೇರಿಸುವ ಅಭಿಷೇಕವು ಶಾಂತಿ, ಪುಷ್ಟಿ ಮತ್ತು ದೈವಿಕ ಶಕ್ತಿಯ ಜಾಗೃತಿಯ ಸಂಕೇತವಾಗಿದೆ. ಜನ್ಮಜನ್ಮಾಂತರದ ಅಥವಾ ಕುಲದ ಕರ್ಮಫಲವಾಗಿ ಜಾತಕದಲ್ಲಿ ಉಂಟಾಗಬಹುದಾದ ಸರ್ಪದೋಷ, ಕಾಳಸರ್ಪದೋಷ ಹಾಗೂ ರಾಹು-ಕೇತು ದೋಷಗಳಿಂದ ಎದುರಾಗುವ ಅಡೆತಡೆಗಳು, ಸಂತಾನ ಅಥವಾ ವಿವಾಹ ವಿಳಂಬಗಳು ಮತ್ತು ಮಾನಸಿಕ ಅಸ್ಥಿರತೆಗಳಿಗೆ ಈ ಪವಿತ್ರ ದಿನದಲ್ಲಿ ಸಲ್ಲಿಸುವ ಮಹಾ ಅಭಿಷೇಕ ಮತ್ತು ನಾಗಪೂಜೆಯು ದೋಷ ಶಾಂತಿಯನ್ನು ನೀಡಿ, ಭಕ್ತರಿಗೆ ಆರೋಗ್ಯ, ಶಾಂತಿ ಮತ್ತು ಕಲ್ಯಾಣವನ್ನು ಕರುಣಿಸುತ್ತದೆ ಎಂಬುದು ಸನಾತನ ನಂಬಿಕೆಯಾಗಿದೆ.

ಧರ್ಮದ ವಿಜಯ, ದೋಷಗಳ ಮುಕ್ತಿ: ಏಕೆ ವಿಶೇಷ ಈ 'ಚಂಪಾ ಷಷ್ಠಿ'? 

ಮಾರ್ಗಶಿರದ ಶುಕ್ಲ ಷಷ್ಠಿಯಂದು ಅರಳುವ ಈ ಚಂಪಾ ಷಷ್ಠಿ ಕೇವಲ ಆಚರಣೆಯಲ್ಲ — ಅದು ದೈವಶಕ್ತಿಯ ಜಾಗೃತಿ ಮತ್ತು ಜೀವನದ ತಡೆಗಳನ್ನು ಕರಗಿಸುವ ಅಪೂರ್ವ ಕ್ಷಣ. ಅಧರ್ಮವನ್ನು ಮೆಟ್ಟಿ ನಿಂತು ಲೋಕಕಲ್ಯಾಣವನ್ನು ಸ್ಥಾಪಿಸಿದ ಭಗವಾನ್ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಮಹಾ ವಿಜಯದ ಸ್ಮರಣೆಯೇ ಈ ಪರ್ವದ ಜೀವಾಳ. ಶಕ್ತಿ, ಜ್ಞಾನ ಮತ್ತು ನಿರ್ಭಯತೆಯ ಪ್ರತೀಕವಾದ ಸ್ವಾಮಿಯ ಸನ್ನಿಧಿಯಲ್ಲಿ ಮನಸ್ಸಿನ ಗೊಂದಲಗಳು ಕರಗಿ, ಹೊಸ ದೃಷ್ಟಿಕೋನ ಮತ್ತು ಆತ್ಮಬಲ ಮೂಡುತ್ತದೆ ಎಂದು ಪುರಾಣಗಳು ಹೇಳುತ್ತವೆ.

ನಾಗಲೋಕದ ತಂಪು ಮತ್ತು ಸುಬ್ರಹ್ಮಣ್ಯನ ತೇಜಸ್ಸು ಬೆಸೆದ ಈ ಪವಿತ್ರ ದಿನದಲ್ಲಿ ಸಲ್ಲಿಸುವ ಆರಾಧನೆಯು ಜೀವನದ ಹಲವು ಹಂತಗಳಲ್ಲಿ ಬದಲಾವಣೆಯನ್ನು ತರುತ್ತದೆ. ಜಾತಕದಲ್ಲಿನ ಸರ್ಪದೋಷ, ಕಾಳಸರ್ಪದೋಷ ಅಥವಾ ರಾಹು-ಕೇತು ಪ್ರಭಾವದಿಂದ ಎದುರಾಗುವ ತಡೆಗಳು, ವಿವಾಹ-ಸಂತಾನದ ನಿರೀಕ್ಷೆಗಳು, ಆರೋಗ್ಯದ ಏರಿಳಿತಗಳು ಹಾಗೂ ಮನದ ಅಶಾಂತಿಗೆ ಈ ದಿನದ ಶ್ರದ್ಧಾಭಕ್ತಿಯ ಸೇವೆಗಳು ದಿವ್ಯ ಸಾಂತ್ವನ ನೀಡುತ್ತವೆ. 

ಚಂಪ ಷಷ್ಠಿಯಂದು ಸುಬ್ರಹ್ಮಣ್ಯ ಮಹಾ ಅಭಿಷೇಕದ ಮಹತ್ವ - ಧರ್ಮರಕ್ಷಕ ಹಾಗೂ ನಾಗಾಧಿಪತಿಯಾದ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಕೃಪೆ ಪಡೆಯಲು ಚಂಪಾ ಷಷ್ಠಿಯಂದು ನೆರವೇರಿಸುವ ಮಹಾ ಅಭಿಷೇಕವು ಅತ್ಯಂತ ಶ್ರೇಷ್ಠವಾದದ್ದು. ವೇದಮಂತ್ರಗಳ ಘೋಷದ ನಡುವೆ ಕ್ಷೀರಾಭಿಷೇಕ, ಪಂಚಾಮೃತ ಮತ್ತು ಇತರ ಪವಿತ್ರ ದ್ರವ್ಯಗಳಿಂದ ನಡೆಯುವ ಈ ಅಭಿಷೇಕವು ಮನಸ್ಸಿನ ತಾಪ ಮತ್ತು ಜೀವನದ ಅಡೆತಡೆಗಳನ್ನು ದೂರ ಮಾಡುತ್ತದೆ. ಜಾತಕದಲ್ಲಿನ ನಾಗದೋಷ, ಸರ್ಪದೋಷ ಹಾಗೂ ರಾಹು-ಕೇತು ದೋಷಗಳಿಂದ ಮುಕ್ತಿ ಪಡೆದು,ಸಂತಾನ ಭಾಗ್ಯ, ಶೀಘ್ರ ವಿವಾಹ ಯೋಗ, ಆರೋಗ್ಯ ವೃದ್ಧಿ ಮತ್ತು ಕುಟುಂಬದ ಸಮೃದ್ಧಿಗಾಗಿ ಈ ಪವಿತ್ರ ದಿನದಂದು ಸುಬ್ರಹ್ಮಣ್ಯ ಮಹಾ ಅಭಿಷೇಕದಲ್ಲಿ ಸಂಕಲ್ಪ ಮಾಡಲಾಗುವುದು.

ಚಂಪ ಷಷ್ಠಿಯಂದು ಸರ್ಪದೋಷ ನಿವಾರಣಾ ನಾಗ ಪೂಜೆಯ ಮಹತ್ವ - ನಾಗದೇವತೆಗಳ ಅನುಗ್ರಹ ಪಡೆಯಲು ಚಂಪಾ ಷಷ್ಠಿಯಂದು ನೆರವೇರಿಸುವ ಸರ್ಪದೋಷ ನಿವಾರಣಾ ನಾಗ ಪೂಜೆಯು ಅತ್ಯಂತ ಫಲಪ್ರದವಾದದ್ದು. ಜಾತಕದ ಸರ್ಪದೋಷ, ಕಾಲಸರ್ಪ ದೋಷ ಹಾಗೂ ನಾಗಸಂಬಂಧಿತ ದೋಷಗಳಿಂದ ಉಂಟಾಗುವ ವಿಳಂಬ ಮತ್ತು ಅಡೆತಡೆಗಳನ್ನು ನಿವಾರಿಸಲು ಈ ಪವಿತ್ರ ದಿನದಂದು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಶಾಸ್ತ್ರೋಕ್ತ ಮಂತ್ರಪಠಣ, ಅಭಿಷೇಕ ಮತ್ತು ನಾಗಾರಾಧನೆಯ ಮೂಲಕ ಸಂತಾನ ಪ್ರಾಪ್ತಿ, ಶೀಘ್ರ ವಿವಾಹ ಯೋಗ, ಆರೋಗ್ಯ ವೃದ್ಧಿ ಹಾಗೂ ಕುಟುಂಬದ ರಕ್ಷಣೆಗಾಗಿ ಪ್ರಾರ್ಥಿಸಬಹುದು. ಈ ಪೂಜೆಯಲ್ಲಿ ಸಂಕಲ್ಪಿಸುವುದರಿಂದ ಬದುಕಿನಲ್ಲಿ ಸ್ಥಿರತೆ ಮತ್ತು ಮನೆಯಲ್ಲಿ ಶಾಂತಿ-ನೆಮ್ಮದಿ ಲಭಿಸುತ್ತದೆ ಎಂಬ ಪ್ರತೀತಿ ಇದೆ.

ವೇದಮಂದಿರದ ವತಿಯಿಂದ ಡಿಸೆಂಬರ್ 15 ಮಂಗಳವಾರ ದಂದು ಚಂಪಾ ಷಷ್ಠಿ ವಿಶೇಷ "ಚಂಪಾ ಷಷ್ಠಿ ಸುಬ್ರಹ್ಮಣ್ಯ ಮಹಾ ಅಭಿಷೇಕ ಮತ್ತು ಸರ್ಪದೋಷ ನಿವಾರಣಾ ನಾಗ ಪೂಜೆ"ಯನ್ನು ಆಯೋಜಿಸಲಾಗಿದೆ. ಇಂದೇ ನಿಮ್ಮ ಹೆಸರು ಮತ್ತು ಗೋತ್ರವನ್ನು ನೊಂದಾಯಿಸಿಕೊಳ್ಳಿ . ಪೂಜೆ ನೆರವೇರಿದ ಬಳಿಕ, ಪೂಜೆಯ ಸಂಪೂರ್ಣ ವಿಡಿಯೋ —48 ಗಂಟೆಗಳಲ್ಲಿ ನಿಮ್ಮ WhatsAppಗೆ ಕಳುಹಿಸಲಾಗುತ್ತದೆ. 


ಪೂಜೆಯ ಪ್ರಯೋಜನಗಳು

1

ಸರ್ಪದೋಷ ಹಾಗೂ ನಾಗದೋಷ ನಿವಾರಣೆ

ಜಾತಕದಲ್ಲಿ ಅಥವಾ ಜೀವನದಲ್ಲಿ ಕಂಡುಬರುವ ಸರ್ಪದೋಷ, ನಾಗದೋಷ ಮತ್ತು ಕಾಳಸರ್ಪ ದೋಷದ ಪ್ರತಿಕೂಲ ಪರಿಣಾಮಗಳು ಶಮನಕ್ಕಾಗಿ ಪ್ರಾರ್ಥನೆ.

2

ಭಯ ಮತ್ತು ಆತಂಕಗಳಿಂದ ಮುಕ್ತಿ

ಮನಸ್ಸಿನಲ್ಲಿರುವ ಭಯ, ಅಸುರಕ್ಷತೆ ಮತ್ತು ಆತಂಕಗಳು ದೂರವಾಗಿ ಧೈರ್ಯ ಹಾಗೂ ಆತ್ಮಸ್ಥೈರ್ಯ ಹೆಚ್ಚಿಸಲು.

3

ಶತ್ರು ಮತ್ತು ನಕಾರಾತ್ಮಕ ಶಕ್ತಿಗಳ ನಿವಾರಣೆ

ಕೆಟ್ಟ ದೃಷ್ಟಿ, ಅಸೂಯೆ, ಶತ್ರುಬಾಧೆ ಮತ್ತು ದುಷ್ಟಶಕ್ತಿಗಳ ಪ್ರಭಾವದಿಂದ ರಕ್ಷಣೆ ಕೋರುವುದು.

4

ಕಾರ್ಯಸಿದ್ಧಿ ಮತ್ತು ವೃತ್ತಿ ಪ್ರಗತಿ

ಉದ್ಯೋಗ, ವ್ಯಾಪಾರ ಮತ್ತು ಶಿಕ್ಷಣದಲ್ಲಿ ಎದುರಾಗುವ ಅಡೆತಡೆಗಳು ನಿವಾರಣೆಯಾಗಿ ಏಳಿಗೆ ಹಾಗೂ ಯಶಸ್ಸು ದೊರೆಯಲೆಂದು ಸಂಕಲ್ಪ.

5

ಸಂತಾನ ಮತ್ತು ಕೌಟುಂಬಿಕ ಕ್ಷೇಮ

ಸಂತಾನ ಪ್ರಾಪ್ತಿಗೆ ಇರುವ ಅಡೆತಡೆಗಳು ನಿವಾರಣೆಯಾಗಿ, ಕುಟುಂಬದ ಸದಸ್ಯರ ಆಯುರಾರೋಗ್ಯ ಮತ್ತು ವಂಶಾಭಿವೃದ್ಧಿಗೆ ಪ್ರಾರ್ಥಿಸಬಹುದು

6

ವೈವಾಹಿಕ ಮತ್ತು ಆರ್ಥಿಕ ಸ್ಥಿರತೆ

ವಿವಾಹ ವಿಳಂಬ, ದಾಂಪತ್ಯದ ಸಮಸ್ಯೆಗಳು ಮತ್ತು ಆರ್ಥಿಕ ತೊಂದರೆಗಳು ನಿವಾರಣೆಯಾಗಿ ಜೀವನದಲ್ಲಿ ಸ್ಥಿರತೆ.

7

ಆರೋಗ್ಯ, ಶಾಂತಿ ಮತ್ತು ದೈವಾನುಗ್ರಹ

ದೈಹಿಕ ಆರೋಗ್ಯ ಸುಧಾರಿಸಿ ಮನಃಶಾಂತಿ ನೆಲೆಸುವುದರ ಜೊತೆಗೆ, ಸುಬ್ರಹ್ಮಣ್ಯ ಸ್ವಾಮಿ ಮತ್ತು ನಾಗದೇವತೆಗಳ ಕೃಪಾಕಟಾಕ್ಷದಿಂದ ಕುಟುಂಬಕ್ಕೆ ಸಂಪೂರ್ಣ ರಕ್ಷಣೆ ಕೋರುವುದು.

ಪೂಜೆಯ ವಿಧಾನ

1

ಮಹಾಸಂಕಲ್ಪ

ಭಕ್ತರ ಹೆಸರು, ಗೋತ್ರ ಮತ್ತು ಇಷ್ಟಾರ್ಥಗಳೊಂದಿಗೆ ಸುಬ್ರಹ್ಮಣ್ಯ ಸ್ವಾಮಿ ಹಾಗೂ ನಾಗದೇವತೆಗಳ ಸನ್ನಿಧಿಯಲ್ಲಿ ಮಹಾಸಂಕಲ್ಪ ನೆರವೇರಿಸಲಾಗುತ್ತದೆ.

2

ಗಣಪತಿ ಪೂಜೆ ಮತ್ತು ಪುಣ್ಯಾಹವಾಚನ

ಪೂಜೆಯು ಯಾವುದೇ ವಿಘ್ನಗಳಿಲ್ಲದೆ ಸುಸೂತ್ರವಾಗಿ ನೆರವೇರಲು ಆದಿಪೂಜಿತ ಗಣಪತಿ ಪೂಜೆ ಮತ್ತು ಶುದ್ಧಿಗಾಗಿ ಪುಣ್ಯಾಹವಾಚನ ಮಾಡಲಾಗುತ್ತದೆ.

3

ನಾಗದೇವತಾ ಆರಾಧನೆ ಮತ್ತು ಸರ್ಪದೋಷ ನಿವಾರಣಾ ಪೂಜೆ

ಸರ್ಪದೋಷ, ನಾಗದೋಷ ಮತ್ತು ಕಾಳಸರ್ಪ ದೋಷಗಳ ನಿವಾರಣೆಗಾಗಿ ನಾಗಪ್ರತಿಮೆ/ನಾಗದೇವತೆಗಳಿಗೆ ಹಾಲು, ಅರಿಶಿನ, ಕುಂಕುಮ, ಶ್ರೀಗಂಧ, ಹೂವು ಮತ್ತು ವಿಶೇಷ ದ್ರವ್ಯಗಳಿಂದ ಭಕ್ತಿಪೂರ್ವಕ ಪೂಜೆ ಸಲ್ಲಿಸಲಾಗುತ್ತದೆ.

4

ಸುಬ್ರಹ್ಮಣ್ಯ ಸ್ವಾಮಿ ಮಹಾ ಅಭಿಷೇಕ

ಚಂಪಾ ಷಷ್ಠಿಯ ವಿಶೇಷ ಸಂದರ್ಭದಲ್ಲಿ ವೇದಮಂತ್ರಗಳ ಘೋಷದೊಂದಿಗೆ ಪಂಚಾಮೃತ, ಹಾಲು, ಮೊಸರು, ತುಪ್ಪ, ಜೇನು, ಸಕ್ಕರೆ, ಎಳನೀರು, ವಿಭೂತಿ ಹಾಗೂ ಶುದ್ಧ ಜಲದಿಂದ ಸುಬ್ರಹ್ಮಣ್ಯ ಸ್ವಾಮಿಗೆ ಮಹಾ ಅಭಿಷೇಕ ನೆರವೇರಿಸಲಾಗುತ್ತದೆ.

5
✦ The Core Ritual

ಮಂಗಳಾರತಿ

ಮಂಗಳಾರತಿ ಬೆಳಗಿದ ನಂತರ ಭಕ್ತರ ಕುಟುಂಬ ಕ್ಷೇಮ, ಆಯುರಾರೋಗ್ಯ ಮತ್ತು ಶುಭಫಲಗಳಿಗಾಗಿ ಪ್ರಾರ್ಥಿಸಿ ಆಶೀರ್ವಾದ ಕೋರಲಾಗುತ್ತದೆ.

ನಿಮಗೆ ಸಿಗುವ ಪ್ರಯೋಜನಗಳು

ನಿಮ್ಮ ಹೆಸರು, ಗೋತ್ರದೊಂದಿಗೆ ವಿಶೇಷ ಸಂಕಲ್ಪ

ಸಂಪೂರ್ಣ ಪೂಜೆಯ ವಿಡಿಯೋ —48 ಗಂಟೆಗಳಲ್ಲಿ WhatsAppಗೆ

ದೇವಸ್ಥಾನದ ವಿವರಗಳು

ವೈದಿಕ ಯಾಗಶಾಲಾ

ಬೆಂಗಳೂರು.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)

Family Puja

ಮಾನ್ಯ ಪುರೋಹಿತ್ ರವರೇ, ವೇದ ಮಂದಿರ, ತಿರುಪತಿ ಇಲ್ಲಿ ನೆರವೇರಿದ ವಾರಾಹಿ ಮತ್ತು ಚಂಡಿ ಹೋಮ ಪೂಜೆಗಳನ್ನು ವಿಡಿಯೋ ಮುಖಾಂತರ ನಾವೆಲ್ಲರೂ ನೋಡಿ ಧ್ಯನ್ಯರಾಗಿದ್ದೇವೆ. ಈ ಪೂಜೆಯಿಂದ ಶ್ರೀ ವಾರಹಿದೇವಿ ಮತ್ತು ಶ್ರೀ ಚಂಡಿಕಾ ದೇವಿ ಪ್ರಸನ್ನರಾಗಿ ನಮ್ಮ ಕಷ್ಟಕಾರ್ಪಣ್ಯಗಳನ್ನು ನಿವಾರಿಸುತ್ತಾರೆಂದು ಭಾವಿಸುತ್ತೇವೆ. ನಿಮ್ಮ ಪೂಜೆ ಕಾರ್ಯಕ್ರಮಗಳನ್ನು ತುಂಬಾ ಚೆನ್ನಾಗಿ ನಡೆಸಿಕೊಟ್ಟಿರುತ್ತೀರಿ , ಧನ್ಯವಾದ

ಲ
ಲಕ್ಷ್ಮಿ
ಬೆಂಗಳೂರು
Verified
Couple Puja

ವೇದ ಮಂದಿರ ಹೋಮ ನನಗೆ ತುಂಬಾ ಇಷ್ಟ ಆಯ್ತು. ಸ್ಪಷ್ಟವಾದ ಸಂಸ್ಕೃತ ಉಚ್ಚಾರಣೆ, ಮನಸ್ಸಿಗೆ ನೆಮ್ಮದಿ ಕೊಡುವಂತಹ "ವಾರಾಹಿ ಅಮ್ಮನವರ ಪೂಜೆ" ನನ್ನ ಎಲ್ಲಾ ಕಷ್ಟಗಳನ್ನು ಅಮ್ಮನವರು ಪರಿಹಾರ ಮಾಡುವರೆಂದು ಸಂಕಲ್ಪ ಪೂಜೆಯನ್ನ ನೆರವೇರಿಸಿ ಕೊಟ್ಟಂತ ವೇದಮಂದಿರ ಪುರೋಹಿತರಿಗೆ ಅನಂತ ಕೋಟಿ ಧನ್ಯವಾದಗಳು

ಹ
ಹನುಮಂತರಾಯ
ಹುಬ್ಬಳ್ಳಿ
Verified
Private Puja

ನಮ್ಮ ಕುಟುಂಬದ ಒಳಿತಿಗಾಗಿ ಸಕಾಲದಲ್ಲಿ ಒಳ್ಳೆಯ ಮುಹೂರ್ತದಲ್ಲಿ ಪೂಜೆ ಹೋಮ ಮಾಡಿಕೊಟ್ಟ *ವೇದ ಮಂದಿರ* ಹಿರಿಯರಿಗೆ ಧನ್ಯವಾದಗಳು 🕉️🙏❤️

ವ
ವಿಶ್ವನಾಥ್
ಶಿವಮೊಗ್ಗ
Verified

Reviews

4.920K+
ಲ

ಲಕ್ಷ್ಮಿ

ಮಾನ್ಯ ಪುರೋಹಿತ್ ರವರೇ, ವೇದ ಮಂದಿರ, ತಿರುಪತಿ ಇಲ್ಲಿ ನೆರವೇರಿದ ವಾರಾಹಿ ಮತ್ತು ಚಂಡಿ ಹೋಮ ಪೂಜೆಗಳನ್ನು ವಿಡಿಯೋ ಮುಖಾಂತರ ನಾವೆಲ್ಲರೂ ನೋಡಿ ಧ್ಯನ್ಯರಾಗಿದ್ದೇವೆ. ಈ ಪೂಜೆಯಿಂದ ಶ್ರೀ ವಾರಹಿದೇವಿ ಮತ್ತು ಶ್ರೀ ಚಂಡಿಕಾ ದೇವಿ ಪ್ರಸನ್ನರಾಗಿ ನಮ್ಮ ಕಷ್ಟಕಾರ್ಪಣ್ಯಗಳನ್ನು ನಿವಾರಿಸುತ್ತಾರೆಂದು ಭಾವಿಸುತ್ತೇವೆ. ನಿಮ್ಮ ಪೂಜೆ ಕಾರ್ಯಕ್ರಮಗಳನ್ನು ತುಂಬಾ ಚೆನ್ನಾಗಿ ನಡೆಸಿಕೊಟ್ಟಿರುತ್ತೀರಿ , ಧನ್ಯವಾದ

5.0
ಹ

ಹನುಮಂತರಾಯ

ವೇದ ಮಂದಿರ ಹೋಮ ನನಗೆ ತುಂಬಾ ಇಷ್ಟ ಆಯ್ತು. ಸ್ಪಷ್ಟವಾದ ಸಂಸ್ಕೃತ ಉಚ್ಚಾರಣೆ, ಮನಸ್ಸಿಗೆ ನೆಮ್ಮದಿ ಕೊಡುವಂತಹ "ವಾರಾಹಿ ಅಮ್ಮನವರ ಪೂಜೆ" ನನ್ನ ಎಲ್ಲಾ ಕಷ್ಟಗಳನ್ನು ಅಮ್ಮನವರು ಪರಿಹಾರ ಮಾಡುವರೆಂದು ಸಂಕಲ್ಪ ಪೂಜೆಯನ್ನ ನೆರವೇರಿಸಿ ಕೊಟ್ಟಂತ ವೇದಮಂದಿರ ಪುರೋಹಿತರಿಗೆ ಅನಂತ ಕೋಟಿ ಧನ್ಯವಾದಗಳು

5.0
ವ

ವಿಶ್ವನಾಥ್

ನಮ್ಮ ಕುಟುಂಬದ ಒಳಿತಿಗಾಗಿ ಸಕಾಲದಲ್ಲಿ ಒಳ್ಳೆಯ ಮುಹೂರ್ತದಲ್ಲಿ ಪೂಜೆ ಹೋಮ ಮಾಡಿಕೊಟ್ಟ *ವೇದ ಮಂದಿರ* ಹಿರಿಯರಿಗೆ ಧನ್ಯವಾದಗಳು 🕉️🙏❤️

5.0
ವೇದಮಂದಿರ್‌ನೊಂದಿಗೆ ಪ್ರಸಿದ್ಧ ದೇವಾಲಯಗಳ ಪೂಜೆಗಳ ಮೂಲಕ ಆರೋಗ್ಯ, ಐಶ್ವರ್ಯ ಮತ್ತು ಶಾಂತಿಯನ್ನು ಪಡೆದುಕೊಳ್ಳಿ
ಸುಬ್ರಹ್ಮಣ್ಯ ಮಹಾ ಅಭಿಷೇಕ ಮತ್ತು ಸರ್ಪದೋಷ ನಿವಾರಣಾ ನಾಗ ಪೂಜೆ
ISO Certified 27001100% Secure PaymentCustomer Support
ಪೂಜೆ ಮುಗಿದ 48 ಗಂಟೆಗಳ ಒಳಗೆ ಪೂಜೆಯ ವಿಡಿಯೋವನ್ನು ನಿಮ್ಮ WhatsAppಗೆ ಕಳುಹಿಸಲಾಗುತ್ತದೆ.

You won't be charged yet

ISO Certified 27001100% Secure PaymentCustomer Support